ಎಸ್‌ವೈ‌ಎಸ್ ಸೂರಿಕುಮೇರು ಬ್ರಾಂಚ್ ನಿಂದ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ಹಾಗೂ ಪಯಸ್ವಿ ಉಸ್ತಾದ್ ಅನುಸ್ಮರಣೆ

(ನ್ಯೂಸ್ ಕಡಬ) newskadaba.com ಮಾಣಿ, ಸೆ. 03. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈ‌ಎಸ್ ಮತ್ತು ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ಹಾಗೂ ಮರ್‌ಹೂಂ ಅಬ್ದುಲ್ ಲತೀಫ್ ಸಅದಿ ಪಯಸ್ವಿ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮವು ನಡೆಯಿತು.

ಮಾಣಿ ಸೆಂಟರ್ ನಾಯಕರಾದ ಹೈದರ್ ಸಖಾಫಿ ಶೇರಾ ಕಾರ್ಯಕ್ರಮದ ನೇತೃತ್ವ ವಹಿಸಿ ದುಆ ಮತ್ತು ಅನುಸ್ಮರಣ ಪ್ರಭಾಷಣ ನಡೆಸಿದರು. ಕಾರ್ಯಕ್ರಮದಲ್ಲಿ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಪೇರಮೊಗರು, ಸಾಂತ್ವನ ಕಾರ್ಯದರ್ಶಿ ಸುಲೈಮಾನ್ ಸೂರಿಕುಮೇರು, ಬ್ರಾಂಚ್ ಇಸಾಬಾ ಸೆಕ್ರೆಟರಿ ಹನೀಫ್ ಸಂಕ, ಯೂಸುಫ್ ಹಾಜಿ ಸೂರಿಕುಮೇರು, ಇಬ್ರಾಹಿಂ ಮಾಣಿ, ಹಂಝ ಸೂರಿಕುಮೇರು, ಫಾರೂಕ್ ಯೂಸುಫ್ ಸೂರಿಕುಮೇರು, ಇಮ್ರಾನ್ ಸೂರಿಕುಮೇರು, ಅಜ್ಮಲ್ ಮಾಣಿ ಮುಂತಾದವರು ಭಾಗವಹಿಸಿದರು. ಅಬ್ದುಲ್ ಕರೀಂ ಸೂರಿಕುಮೇರು ಅಧ್ಯಕ್ಷತೆಯಲ್ಲಿ, ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿ ಧನ್ಯವಾದಗೈದರು.

Also Read  ಬಿಸಿಎ ವಿದ್ಯಾರ್ಥಿಯೋರ್ವ ಐದನೇ ಮಹಡಿಯಿಂದ ಬಿದ್ದು ಮೃತ್ಯು

error: Content is protected !!
Scroll to Top