(ನ್ಯೂಸ್ ಕಡಬ) newskadaba.com ತೆಕ್ಕಿಲ್, ಸೆ. 03. ಕರ್ನಾಟಕ ಹಾಗೂ ಕೇರಳದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಸಂಪಾಜೆ, ಗೂನಡ್ಕ, ದರ್ಕಾಸ್, ಪೇರಡ್ಕ, ಅರಂತೋಡು ಸುಳ್ಯ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಇರುವ ಅತಿ ಪುರಾತನ ಪ್ರತಿಷ್ಠಿತ ದೊಡ್ಡ ಕುಟುಂಬ ಎಂಬ ಹೆಗ್ಗಳಿಕೆಗೆ ಹೆಸರಾಗಿರುವ ಸುಮಾರು 200ಕ್ಕಿಂತ ಹೆಚ್ಚು ವರುಷಗಳ ಇತಿಹಾಸ ಹೊಂದಿರುವ ತೆಕ್ಕಿಲ್ ಮನೆತನದ ಒಕ್ಕೂಟ ಮತ್ತು ಸಮಿತಿಯನ್ನು ಇತ್ತೀಚೆಗೆ ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕದ ತೆಕ್ಕಿಲ್ ತರವಾಡು ಮನೆಯಲ್ಲಿ ಕುಟುಂಬದ ಸದಸ್ಯರು ಸೇರಿ ಹೊಸ ಸಮಿತಿಯನ್ನು ರಚಿಸಿದರು.
ಈ ಸಂದರ್ಭದಲ್ಲಿ ಕುಟುಂಬದ ಹಲವಾರು ಹಿರಿಯ-ಕಿರಿಯ ಸದಸ್ಯರು ಹಾಜರಿದ್ದು, ಕುಟುಂಬದ ಹಿನ್ನೆಲೆ, ಸಮಾಜ ಸೇವೆ, ಧಾರ್ಮಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರ, ಕೃಷಿ, ಉದ್ಯಮ, ಶಾಲೆ, ಮದರಸ ಮತ್ತು ಕೋಮು ಸೌಹಾರ್ದತೆಗೆ ಕುಟುಂಬ ಹಿರಿಯರು ಕಳೆದ ಇನ್ನೂರು ವರ್ಷಗಳಿಂದ ಅವಿಭಕ್ತ ಸೌತ್ ಕೆನರಾ (ದಕ್ಷಿಣ ಕನ್ನಡ) ಜಿಲ್ಲೆಯ ಭಾಗವಾದ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆ ಅಲ್ಲದೆ ಕೊಡಗು ಜಿಲ್ಲೆಯ ಸಹಿತ ಎರಡು ರಾಜ್ಯಗಳ ವಿವಿಧ ಬಾಗಗಳಲ್ಲಿ ನೀಡಿದ ಕೊಡುಗೆಯನ್ನು ಹಿರಿಯರು ಸ್ಮರಿಸಿದರು. ಈ ಪರಂಪರೆಯನ್ನು ಮುಂದುವರಿಸಿ ಕುಟುಂಬದಲ್ಲಿ ಇರುವ ಬಡವರ ಏಳಿಗೆಗೆ ವಿವಿಧ ರೀತಿಯ ಸಹಾಯ ಮಾಡಲು, ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಕುಟುಂಬದ ಸರ್ವ ಸದಸ್ಯರ ಕುಟುಂಬ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. ಟಿ.ಎ.ಖಾಲಿದ್ ತೆಕ್ಕಿಲ್ ಪೇರಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿಯಾದ ಅಶ್ರಫ್ ಟರ್ಲಿ ತೆಕ್ಕಿಲ್ ರವರು ಸ್ವಾಗತಿಸಿದರು. ಬಹು ಸಾಜಿದ್ ಅಝ್ಹರಿ ಪೇರಡ್ಕ ದುಆಃ ನೆರವೇರಿಸಿ ಮನ್ಸೂರ್ ಪಾರೆಕ್ಕಲ್ ತೆಕ್ಕಿಲ್ ವಂದಿಸಿದರು.
ನೂತನ ತೆಕ್ಕಿಲ್ ಪದಾಧಿಕಾರಿಗಳು;
ಸಮಿತಿಯ ಗೌರವಾಧ್ಯಕ್ಷರಾಗಿ ಇಬ್ರಾಹಿಂ ತೆಕ್ಕಿಲ್ ಚೊಕ್ಕಾಡಿ, ಅಧ್ಯಕ್ಷರಾಗಿ ಟಿ. ಎಂ. ಶಾಹಿದ್ ತೆಕ್ಕಿಲ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಟರ್ಲಿ ತೆಕ್ಕಿಲ್ ಬೆಂಗಳೂರು, ಕೋಶಾಧಿಕಾರಿಯಾಗಿ ಟಿ.ಎಂ. ಖಾಲಿದ್ ತೆಕ್ಕಿಲ್ ಸುಳ್ಯರವರನ್ನು ಸರ್ವಾನುಮತದಿಂದ ಆರಿಸಲಾಯಿತು. ಉಪಾಧ್ಯಕ್ಷರುಗಳಾಗಿ ಅಬ್ದುಲ್ಲ ಟಿ.ಬಿ ತೆಕ್ಕಿಲ್ ಗೂನಡ್ಕ,
ಮಹಮ್ಮದ್ ಕುಂಞಿ ಟ.ಎ. ತೆಕ್ಕಿಲ್ ಪೇರಡ್ಕ ಗೂನಡ್ಕ,
ಆರಿಫ್ ಟಿ. ಇ. ತೆಕ್ಕಿಲ್ ಪೇರಡ್ಕ ಗೂನಡ್ಕ, ಕಾರ್ಯದರ್ಶಿಗಳಾಗಿ ಪಾರೆಕ್ಕಲ್ ಮನ್ಸೂರ್ ಕೆ. ಎಂ. ತೆಕ್ಕಿಲ್ ಅರಂತೋಡು, ರಿಯಾಝ್ ತೆಕ್ಕಿಲ್, ಜಾಫರ್ ಟಿ. ಎಂ. ತೆಕ್ಕಿಲ್ ಗೂನಡ್ಕರವರನ್ನು ಆಯ್ಕೆ ಮಾಡಲಾಯಿತು.
ನೂತನ ಸಮಿತಿ ಸದಸ್ಯರಾಗಿ ಜಾಫರ್ ಸಾದಿಕ್ ಎಸ್.ಎ ತೆಕ್ಕಿಲ್ ಮಂಗಳೂರು, ಸಾದಿಕ್ ಮಾಸ್ಟರ್ ಚಟ್ಟೆಕ್ಕಲ್ ಕಲ್ಲುಗುಂಡಿ, ಅಯ್ಯೂಬ್ ದರ್ಕಾಸ್ ಗೂನಡ್ಕ ಬೆಂಗಳೂರು, ಅಮೀರ್ ಪಿ. ಎಂ ಪೇರಡ್ಕ ಬೆಂಗಳೂರು, ಜುರೈದ್ ತೆಕ್ಕಿಲ್ ಪೇರಡ್ಕ ಕಾಸರಗೋಡು, ಹಾರಿಸ್ ಸಿ.ಎ, ಅಶ್ರಫ್ ಎ.ಟಿ. ದೊಡ್ಡಡ್ಕ ಗೂನಡ್ಕ, ಬಾತಿಷಾ ಹಾರಿಸ್ ಪಿ.ಎಂ ತೆಕ್ಕಿಲ್ ಬೆಂಗಳೂರು, ಅಮೀರ್ ಮುನಂಬ ಚೆಂಗಳ ಕಾಸರಗೋಡು
ಸಲಹಾ ಸಮಿತಿ ಸದಸ್ಯರಾಗಿ
ಹಾಜಿ ಟಿ.ಎಂ ಬಾಬ ತೆಕ್ಕಿಲ್ ಅರಂತೋಡು, ಹಾಜಿ ಮೂಸಾನ್ ತೆಕ್ಕಿಲ್ ಗೂನಡ್ಕ, ಟಿ.ಎಂ.ಅಬ್ದುಲ್ ಖಾದರ್ ತೆಕ್ಕಿಲ್ ಕಲ್ಲುಗುಂಡಿ, ಅಬ್ದುಲ್ಲ ಪಿ.ಎಂ. ದರ್ಕಾಸ್ ಗೂನಡ್ಕ, ಹಾಜಿ ರಝಾಕ್ ಅಡಿಮಾರಡ್ಕ ಅರಂತೋಡು, ಹಾಜಿ ರಜಾಕ್ ಟಿ.ಎಂ. ದರ್ಕಾಸ್ ಗೂನಡ್ಕ, ಅಹ್ಮದ್ ಸಜ್ಜಾದ್ ತೆಕ್ಕಿಲ್ ಚೆರ್ಕಳ ಕಾಸರಗೋಡು, ಹಾಜಿ ಸಾಜಿದ್ ಅಝ್ಹರಿ ಪೇರಡ್ಕ ಗೂನಡ್ಕ, ಅಝರುದ್ದೀನ್ ಅಝ್ಹರಿ ಆಡಿಮರಡ್ಕ ಅರಂತೋಡು ಮೊದಲಾದವರನ್ನು
ಆಯ್ಕೆ ಮಾಡಲಾಯಿತು.