ಕಡಬದ ವಿವಿಧ ಸಂಘಸಂಸ್ಥೆಗಳ ಹಾಗೂ ಸಾರ್ವಜನಿಕರ ಪರವಾಗಿ ► ಸಾಹಿತಿ ಗೋಪಾಲ್ ರಾವ್‌ರಿಗೆ ಸಾರ್ವಜನಿಕ ಶ್ರದ್ಧಾಂಜಲಿ

(ನ್ಯೂಸ್ ಕಡಬ) newskadaba.com ಕಡಬ, ನ.16. ಗೋಪಾಲ ರಾವ್ ರವರು ಕಡಬ ಕಂಡ ಅತ್ಯಂತ ಶ್ರೇಷ್ಠ ಹಾಗೂ ಚಿಂತನಾ ಶೀಲ ಸಾಹಿತಿಯಾಗಿ ಕಡಬಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕೊಕ್ಕಡ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ವಿಶ್ವನಾಥ್ ರೈ ಪೆರ್ಲ ಹೇಳಿದರು.

ಅವರು ಇತ್ತೀಚೆಗೆ ನಮ್ಮಿಂದ ಅಗಲಿದ ಕಡಬದ ಹಿರಿಯ ಸಾಹಿತಿ, ರಾಷ್ಟ್ರ ಪ್ರಶಸ್ತಿ ವಿಜೇತ ಧಾರ್ಮಿಕ ಮುಂದಾಳು, ಸಾಮಾಜಿಕ ಹಿತಚಿಂತಕ, ನಿವೃತ್ತ ಮುಖ್ಯ ಶಿಕ್ಷಕ ದಿ| ಗೋಪಾಲ್ ರಾವ್ ರವರಿಗೆ ಗುರುವಾರದಂದು ಕಡಬದ ಅನುಗ್ರಹ ಮಿನಿ ಹಾಲ್ ನಲ್ಲಿ ನಡೆದ ಕಡಬದ ವಿವಿಧ ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

Also Read  ಮಂಗಳೂರು: ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಹಿಳಾ ವಿಭಾಗದ ವತಿಯಿಂದ ಟೈಲರಿಂಗ್ ತರಬೇತಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರಾದ ಸಿ. ಫಿಲಿಪ್ ವಹಿಸಿದ್ದರು. ಜಿ.ಪಂ.ಸದಸ್ಯರಾದ ಪಿ.ಪಿ.ವರ್ಗೀಸ್, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕಡಬ, ಸೀತಾರಾಮ ಗೌಡ ಪೊಸವಳಿಕೆ, ಜಿ.ಪ. ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ನಿವೃತ್ತ ಶಿಕ್ಷಕರಾದ ಸಾಂತಪ್ಪ ಗೌಡ, ಕಡಬ ಟೌನ್ ಜುಮಾ ಮಸೀದಿಯ ಅಧ್ಯಕ್ಷರಾದ ಎಸ್. ಅಬ್ದುಲ್ ಖಾದರ್, ಗೋಪಾಲ ರಾವ್‌ರ ಹಿರಿಯ ಪುತ್ರ ಶರತ್ ರಾವ್ ಮೊದಲಾದವರು ಉಪಸ್ಥಿತರಿದ್ದರು.

Also Read  ಕಡಬ ಮೆಸ್ಕಾಂ ಜೆ.ಇ ಆಗಿ ವಸಂತ ಕುಮಾರ್ ಟಿ.ಎಂ ಅಧಿಕಾರ ಸ್ವೀಕಾರ

error: Content is protected !!
Scroll to Top