ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆಗೆ ಅರ್ಜಿ ಆಹ್ವಾನ

 (ನ್ಯೂಸ್ ಕಡಬ) newskadaba.com ಮ0ಗಳೂರು, ಜೂ.13. ಅರಿವು ಯೊಜನೆಯಡಿಯಲ್ಲಿ ವೃತ್ತಿನಿರತ ವಿದ್ಯಾಭ್ಯಾಸಕ್ಕಾಗಿ ಅಂದರೆ ಎಂ.ಬಿ.ಬಿ.ಎಸ್, ಇಂಜಿನಿಯರಿಂಗ್, ಎಂ.ಬಿ.ಎ, ಎಂಸಿ.ಎ, ಎಂ.ಟೆಕ್, ಪಿ.ಹೆಚ್.ಡಿ, ಎಂ.ಇ, ಎಂ.ಎಸ್ (ಡಿಗ್ರಿ), ಎಂ.ಡಿ, ಎಂ.ಎಫ್.ಎ, ಎಂ.ಡಿ.ಎಸ್, ಎಂ.ಟಿ.ಎ, ಎಂ.ಐ.ಬಿ, ಬಿ.ಎ, ಬಿ.ಕಾಂ, ಡಿ.ಎಡ್, ಐ.ಟಿ.ಐ, ಡಿಪ್ಲೊಮೊ, ನಸಿರ್ಂಗ್, ಬಿ.ಡಿ.ಎಸ್, ಎಂ.ಎ, ಬಿ.ಎಸ್ಸಿ, ಬಿ.ಎ, ಬಿ.ಕಾಂ, ಏರ್ ಕ್ರಾಫ್ಟ್, ಮಂಟನೆನ್ಸ್ ಇಂಜಿನಿಯರಿಂಗ್, ಟೆಕ್ನಿಕಲ್ ಮ್ಯಾನೆಜ್ಮೆಂಟ್ ಇತ್ಯಾದಿ ವಿದ್ಯಾಭ್ಯಾಸಕ್ಕಾಗಿ ಅಭ್ಯರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷಕ್ಕೆ ರೂ. 10 ಸಾವಿರ ದಿಂದ ರೂ. 75 ಸಾವಿರದವರೆಗೆ ವಿವಿಧ ವ್ಯಾಸಂಗಕ್ಕೆ ಅನುಗುಣವಾಗಿ ನಿಗಮದಿಂದ ಸಾಲ ಸೌಲಭ್ಯವನ್ನು ಕಲ್ಪಿಸುವ ಉದ್ದೇಶ ಹೊಂದಿದೆ. ಬಿ.ಇ, ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ.ಯು.ಎಂ.ಎಸ್ ಹಾಗೂ ಬಿ.ಎ.ಎಂ.ಎಸ್ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಸಿ.ಇ.ಟಿಯವರು ನಿಗದಿಪಡಿಸಿದ ಶುಲ್ಕದಂತೆ ಸಾಲ ಬಿಡುಗಡೆ ಮಾಡಲಾಗುವುದು. ಇದಕ್ಕೆ ವಾರ್ಷಿಕವಾಗಿ ಶೇಕಡಾ 2 ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ ಹಾಗೂ ವ್ಯಾಸಂಗ ಮುಗಿಸಿದ ಒಂದು ವರ್ಷದ ನಂತರ ಫಲಾನುಭವಿಯು ನಿಗಮಕ್ಕೆ ಮರುಪಾವತಿಯನ್ನು ಮಾಡಬೇಕಾಗಿದೆ.
“ಅರಿವು” (CET) ಯೋಜನೆ: ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಯು ರ್ಯಾಂಕ್ ಪಡೆದು ವೃತ್ತಿಪರ ಶಿಕ್ಷಣಕ್ಕೆ ಸೀಟನ್ನು ಆಯ್ಕೆ ಮಾಡಿಕೊಂಡ ಕೂಡಲೇ ನಿಗಮವು ಅಂತಹ ವಿದ್ಯಾರ್ಥಿಗೆ ಮುಂಚಿತವಾಗಿ ಸಾಲವನ್ನು ಮಂಜೂರು ಮಾಡುತ್ತದೆ. ಅಂತಹಾ ವಿದ್ಯಾರ್ಥಿಯು ಸಂಬಂಧ ಪಟ್ಟ ಕಾಲೇಜಿಗೆ ಪಾವತಿಸಬೇಕಾದ ಬೋಧನ ಶುಲ್ಕವನ್ನು ನಿಗಮವು ನೇರವಾಗಿ ಏಇಂ ಮೂಲಕ ಪಾವತಿಸುತ್ತದೆ.
“ಅರಿವು” (NEET) ಯೋಜನೆ: ವೈದಕೀಯ ಮತ್ತು ದಂತ ವೈದಕೀಯ ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು NEET ಪರೀಕ್ಷೆಗೆ ಹಾಜರಾದಲ್ಲಿ ಅವರ ಬೋಧನಾ ಶುಲ್ಕದ ಸರಕಾರಿ ಸೀಟ್ ನ ಶೇ. 100ರಷ್ಟು ಅಥವಾ ಖಾಸಗೀ ಸೀಟ್ ಶೇ.50ರಷ್ಟು ಸಾಲವನ್ನು ಮಂಜೂರು ಮಾಡಲಾಗುತ್ತದೆ.
ಮೇಲ್ಕಂಡ ಅರಿವು ಯೋಜನೆ ಸಾಲ ಪಡೆಯ ಬಯಸುವ ಅಭ್ಯರ್ಥಿಗಳು ವೆಬ್‍ಸೈಟ್ www.kmdc.kar.nic.in/arivu2 ಇದಕ್ಕೆ ಲಾಗಿನ್ ಮಾಡಿ ಕೊಳ್ಳಬೇಕು ಮತ್ತು ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿಯ ಪ್ರಿಂಟ್ ಔಟ್ ತೆಗೆದು ಅಗತ್ಯ ದಾಖಲಾತಿಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು. ನವೀಕರಣ ಪ್ರಸ್ತಾವನೆಗೆ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಂಕಪಟ್ಟಿಯ ನಕಲು ಅಥವಾ ಧೃಡೀಕರಣ ಪತ್ರ ಕಳೆದ ಸಾಲಿನಲ್ಲಿ ಸಾಲ ಬಿಡುಗಡೆಯಾಗಿರುವ ಅಭ್ಯರ್ಥಿಗಳಿಗೆ ಮಾತ್ರ 1, 2, 3, 4  ಮತ್ತು 5ನೇ ವರ್ಷದ ಸಾಲದ ಪ್ರಸ್ತಾವನೆ, ಅಭ್ಯರ್ಥಿಗಳಿಂದ ಸ್ವಯಂ ಲಿಖಿತ ಪಡೆದ ಅರ್ಜಿ ಮತ್ತು , ಅದರ ಜೊತೆಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದೃಢೀಕರಣ ಪತ್ರ ಮತ್ತು ಅಂಕಪಟ್ಟಿ ಹಾಗೂ ಈ ಹಿಂದೆ ನಿಗಮದಿಂದ ಬಿಡುಗಡೆ ಮಾಡುವ ಸಾಲದ ಮೊತ್ತಕ್ಕೆ ಶೇ. 10ರಷ್ಟು ಮತ್ತು ಶೇ. 2ರಷ್ಟು ಸೇವಾ ಶುಲ್ಕ ಸಾಲ ಮರು ಪಾವತಿ ಮಾಡಿದ ರಸೀದಿಯನ್ನು ಮೂಲ ಕಡತದ ಜೊತೆಗೆ ನಿಗಮಕ್ಕೆ ಕಳುಹಿಸಲು ಸೂಚಿಸಿದೆ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಯು ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಂಕಪಟ್ಟಿಯನ್ನು ಸಲ್ಲಿಸಬೇಕು ಅಂತಹಾ ವಿದ್ಯಾರ್ಥಿಗಳಿಗೆ ಮುಂದಿನ ಸಾಲದ ಕಂತು ಬಿಡುಗಡೆ ಮಾಡಲಾಗುವುದು. ವಿದ್ಯಾರ್ಥಿಯು ಅಭ್ಯಾಸ ಮಾಡುವ ಕಾಲೇಜಿನ/ ಸಂಸ್ಥೆಯ ಬ್ಯಾಂಕ್ ಖಾತೆ, IFSC ಕೋಡ್ ಮತ್ತು ಈಮೇಲೆ ಐಡಿ ಹಾಗೂ ವಿದ್ಯಾರ್ಥಿಯ ಮೊಬೈಲ್ ನಂಬ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
      ಆಸಕ್ತ ಫಲಾಪೇಕ್ಷಿಗಳು ನಿಗದಿತ ಅರ್ಜಿಗಳನ್ನು ಹಾಗೂ ಹೆಚ್ಚುವರಿ ಮಾಹಿತಿಯನ್ನು ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಝಾದ್ ಅಲ್ಪಸಂಖ್ಯಾತರ ಭವನ, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು 575001 ರವರಿಂದ ಪಡೆಯಬಹುದು. ಅಥವಾ ವೆಬ್‍ಸೆಟ್ www.kmdc.kar.nic.in ನಿಂದ ಅಥವಾ ಕಚೇರಿ ದೂರವಾಣಿ ಸಂಖ್ಯೆ 0824 – 2429044 ಸಂಪರ್ಕಿಸಲು ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.
error: Content is protected !!
Scroll to Top