ಪ್ರಧಾನಿಯನ್ನು ಹತ್ತಿರದಿಂದ ಕಾಣಲು ಆಸೆ ವ್ಯಕ್ತಪಡಿಸಿದ ಬಂಟ್ವಾಳದ ಮುಹಮ್ಮದ್ ಗೆ VVIP ಪಾಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 01. ನಾಳೆ (ಸೆ. 02) ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ಭರದ ಸಿದ್ದತೆ ಜೊತೆಗೆ ಭದ್ರತೆಯನ್ನೂ ಕೂಡಾ ಹೆಚ್ಚಳ ಮಾಡಲಾಗಿದೆ. ಇದರ ನಡುವೆ ಮೋದಿಯನ್ನು ಹತ್ತಿರದಿಂದ ಕಾಣಬೇಕು ಎಂದು ನಮ್ಮ ಕುಡ್ಲ ವಾಹಿನಿಯ ಪ್ರೈಮ್‌ ಕಾರ್ಯಕ್ರಮದಲ್ಲಿ ಆಸೆ ವ್ಯಕ್ತಪಡಿಸಿದ ಬಂಟ್ವಾಳದ ಮಹಮ್ಮದ್‌ ಎಂಬವರಿಗೆ VVIP ಪಾಸ್‌ ದೊರಕಿದೆ.


ಮಹಮ್ಮದ್ ಅವರು ಆ. 28 ರಂದು ನಮ್ಮ ಕುಡ್ಲ ವಾಹಿನಿಯಲ್ಲಿ ನಡೆದ ‘ಕರಾವಳಿಗೆ ವಿಶ್ವನಾಯಕ..!’ ಎಂಬ ಪ್ರೈಮ್‌ ಕಾರ್ಯಕ್ರಮಕ್ಕೆ ಕರೆ ಮಾಡಿ, “ಪ್ರಧಾನಿ ಮೋದಿಯ ತ್ರಿವಳಿ ತಲಾಖ್‌ ಮಸೂದೆಯಿಂದ ಮುಸಲ್ಮಾನ ಹೆಣ್ಣುಮಕ್ಕಳಿಗೆ ಉಪಕಾರವಾಗಿದೆ. ಅವರು ನಮ್ಮ ಮನಸ್ಸಲ್ಲಿದ್ದಾರೆ. ಈ ಎಷ್ಟೋ ಬಡ ಹೆಣ್ಣು ಮಕ್ಕಳಿಗೆ ಅದು ಲಾಭವಾಗಿದೆ. ಅವರನ್ನು ಹತ್ತಿರದಿಂದ ನೋಡುವ ಭಾಗ್ಯ ಕೊಟ್ಟಿದ್ದರೆ ನಾವು ಕುಟುಂಬ ಸಮೇತ ಕಾಣಲು ಬರುತ್ತೇವೆ” ಎಂದಿದ್ದರು. ಈ ಸಂದರ್ಭ ಕಾರ್ಯಕ್ರಮದ ಅತಿಥಿಯಾಗಿದ್ದ ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವರವರು ಪ್ರಧಾನಿಯವರನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಇದೀಗ ಜಗದೀಶ ಶೇಣವ ಅವರು ಮಹಮ್ಮದ್ ಎಂಬವರಿಗೆ VVIP ಪಾಸ್‌ ಕೊಡಿಸಿದ್ದು, ಮೋದಿಯನ್ನು ಹತ್ತಿರದಿಂದ ಕಾಣುವ ಕ್ಷಣಕ್ಕೆ ಕಾತುರದಿಂದ ಕಾಯುತ್ತಿದ್ದಾರೆ.

Also Read  ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಅವ್ಯವಹಾರ ಆರೋಪ ► ಉಬರಡ್ಕ-ಮಿತ್ತೂರು ಗ್ರಾ.ಪಂ. ಅಧ್ಯಕ್ಷ, ಪಿ.ಡಿ.ಓ ವಿರುದ್ಧ ಕೇಸು ದಾಖಲು

error: Content is protected !!
Scroll to Top