ಚಡ್ಡಿಯಲ್ಲಿ ಪದೇ ಪದೇ ಮೂತ್ರ ಮಾಡುತ್ತಿದ್ದ ಬಾಲಕ ➤‌ ಬೆಂಕಿ ಕಡ್ಡಿ ಹೊತ್ತಿಸಿ ಬಾಲಕನ ಖಾಸಗಿ ಅಂಗವನ್ನು ಸುಟ್ಟ ಶಿಕ್ಷಕಿ

(ನ್ಯೂಸ್ ಕಡಬ) newskadaba.com ತುಮಕೂರು, ಸೆ. 01. ಆಗಾಗ್ಗ ಪ್ಯಾಂಟ್ ಒದೆ ಮಾಡಿಕೊಳ್ಳುತ್ತಿದ್ದ ಮೂರು ವರ್ಷದ ಬಾಲಕನ ಮಾರ್ಮಾಂಗವನ್ನು ಸುಟ್ಟಿರುವ ಹೃದಯವಿದ್ರಾವಕ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೊಡೇಕೆರೆಯ ಅಂಗನವಾಡಿ ಕೇಂದ್ರವೊಂದರಲ್ಲಿ ವಾರದ ಹಿಂದೆ ನಡೆದಿದೆ.

ಆರೋಪಿ ಸಹಾಯಕ ಶಿಕ್ಷಕಿ ರಶ್ಮಿ ಎಂದು ಗುರುತಿಸಲಾಗಿದೆ. ಈಕೆ ಆಗಾಗ್ಗೆ ಪ್ಯಾಂಟ್ ಒದ್ದೆ ಮಾಡುತ್ತಿದ್ದ ಎಂದು ಬೆಂಕಿ ಕಡ್ಡಿ ಹೊತ್ತಿಸಿ ಅಪ್ರಾಪ್ತ ಬಾಲಕನ ಖಾಸಗಿ ಅಂಗವನ್ನು ಸುಟ್ಟಿರುವುದಾಗಿ ವರದಿಯಾಗಿದೆ. ವಾರದ ಹಿಂದೆ ಈ ಘಟನೆ ನಡೆದಿದ್ದು, ಬಾಲಕನ ಅಜ್ಜಿಯು ಸ್ನಾನ ಮಾಡಿಸುತ್ತಿದ್ದ ವೇಳೆ, ಬಾಲಕನ ಜನನಾಂಗದ ಮೇಲೆ ಸುಟ್ಟ ಗಾಯವಾಗಿರುವುದನ್ನು ಗಮನಿಸಿದ್ದಾರೆ. ನಂತರ ಬಾಲಕನ ಕುಟುಂಬದವರು ವಿಷಯವನ್ನು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪವಿತ್ರಾ ಅವರ ಗಮನಕ್ಕೆ ತಂದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್ ಎಂ.ಎಸ್ ಮಾತನಾಡಿ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿರುವುದಾಗಿ ತಿಳಿಸಿದರು.

Also Read  ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ ನಾಲ್ವರಿಗೆ ಗಾಯ

error: Content is protected !!
Scroll to Top