(ನ್ಯೂಸ್ ಕಡಬ) bewskadaba.com ಮಾಣಿ, ಸೆ. 01. ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ಕಾರ್ಯಾಚರಿಸುವ ಮದ್ರಸಗಳ ವಿದ್ಯಾರ್ಥಿ ಸಂಘ ಸುನ್ನಿ ಬಾಲ ಸಂಘ ಇದರ ನೂತನ ವಲಯ ಸಮಿತಿ ಮಾಣಿ ರೇಂಜ್ ಒಳಗೊಂಡ 12 ಮದ್ರಸಗಳ ವಿದ್ಯಾರ್ಥಿ ನಾಯಕರನ್ನು ಸೇರಿಸಿಕೊಂಡು ಮಂಗಳವಾರದಂದು ಮಾಣಿ ದಾರುಲ್ ಇರ್ಶಾದ್ ಹಾಲ್ ನಲ್ಲಿ ರೇಂಜ್ ಅಧ್ಯಕ್ಷರಾದ ಯೂನುಸ್ ಸಅದಿ ಪೇರಮೊಗರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಿಷನರಿ ಟ್ರೈನಿಂಗ್ ವಿಭಾಗದ ಕಾರ್ಯದರ್ಶಿ ರಫೀಕ್ ಮದನಿ ಪಾಟ್ರಕೋಡಿ ಸ್ವಾಗತಿಸಿದರು. ವಿಭಾಗದ ಅಧ್ಯಕ್ಷರಾದ ನಝೀರ್ ಅಮ್ಜದಿ ಮಾಣಿ ವಿಷಯ ಮಂಡಿಸಿದರು. ಇಸ್ಮಾಯಿಲ್ ಸಅದಿ ಸೂರ್ಯ,
ಅಬ್ದುಲ್ ಲತೀಫ್ ಸಅದಿ ಶೇರ,
ಹೈದರ್ ಸಖಾಫಿ ಬುಡೋಳಿ,
ಜಬ್ಬಾರ್ ಮದನಿ ಪೇರಮೊಗರು, ಡಿ.ಎಸ್.ಅಬ್ದುಲ್ ರಹ್ಮಾನ್ ಮದನಿ, ಹನೀಫ್ ಸಖಾಫಿ ಪಾಟ್ರಕೋಡಿ, ರಫೀಕ್ ಮದನಿ ಗುಂಡ್ಯಡ್ಕ, ಅಶ್ರಪ್ ಸಖಾಫಿ ಸತ್ತಿಕಲ್ಲು, ಅಬ್ದುಲ್ ರಝ್ಝಾಕ್ ನೌರತುಲ್ ಮದೀನಾ ಮಿತ್ತೂರು ಇವರ ಉಪಸ್ಥಿತಿಯಲ್ಲಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ
ಸವಾದ್ ಪೇರಮೊಗರು, ಪ್ರಧಾನ ಕಾರ್ಯದರ್ಶಿಯಾಗಿ ಅಸ್ಲಂ ಕೆಮ್ಮಾನ್ ಕಜೆ ಕೋಶಾಧಿಕಾರಿಯಾಗಿ ಸಲೀತ್ ಸೂರ್ಯ, ಉಪಾಧ್ಯಕ್ಷರುಗಳಾಗಿ ಸಾಹಿಲ್ ಮಾಣಿ, ಉಸ್ಮಾನ್ ಶೇರಾ, ಹಸನ್ ರಾಝಿ ಸತ್ತಿಕಲ್ಲು, ಜೊತೆ ಕಾರ್ಯದರ್ಶಿಗಳಾಗಿ ರಾಝಿ ನೌರತುಲ್ ಮದೀನ ಮಿತ್ತೂರು, ಅನೀಸ್ ಶೇರಾ ಬುಡೋಳಿ, ಸಅದ್ ಕುದುಂಬ್ಲಾಡಿ, ಸಜ್ಜಾದ್ ಗುಂಡ್ಯಡ್ಕ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಅಬ್ದುಲ್ ಸುಹೈಬ್, ಮುಹಮ್ಮದ್ ಸಿನಾನ್, ಮುಹಮ್ಮದ್ ಇರ್ಶಾದ್, ಅತೂಫ್ ಇಬ್ರಾಹಿಂ, ಮುಹಮ್ಮದ್ ರಾಝಿ, ಮುಹಮ್ಮದ್ ರಾಹಿದ್
ಮುಹಮ್ಮದ್ ಮಸ್ಹೂದ್, ಹುಸೈನ್ ರಾಫಿ ಇವರನ್ನು ಆಯ್ಕೆ ಮಾಡಲಾಯಿತು. ನೂತನ ಕಾರ್ಯದರ್ಶಿ ವಂದಿಸಿದರು.