ಕೊಕ್ಕಡ: ಮಹಿಳೆ ಅನುಮಾನಾಸ್ಪದ ಸಾವು ➤‌ ಪತಿ ಕೊಲೆಗೈದಿರುವ ಶಂಕೆ

(ನ್ಯೂಸ್ ಕಡಬ) newskadaba.com ಕೊಕ್ಕಡ, ಆ. 31. ಇಲ್ಲಿನ ವಿವಾಹಿತ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದ್ದು, ಪತಿಯೇ ಕೊಲೆಗೈದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಮೃತರನ್ನು ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಗಣೇಶ್‌ ಗೌಡ ಅವರ ಪತ್ನಿ ಮೋಹಿನಿ(36) ಎಂದು ಗುರುತಿಸಲಾಗಿದೆ. ಇವರ ಪತಿ ಗಣೇಶ ಗೌಡನಿಗೆ ಕುಡಿತದ ಚಟವಿದ್ದು, ಪತ್ನಿ ಜತೆ ಜಗಳ ನಡೆದು ಗಲಾಟೆ ವಿಕೋಪಕ್ಕೆ ತಿರುಗಿ ಹಲ್ಲೆಗೈದ ಪರಿಣಾಮ ಮೋಹಿನಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದ್ದು, ಮಹಿಳೆ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪಿಎಸ್‌ಐ ಅನಿಲ್‌ ಕುಮಾರ್‌ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಶಯದ ಮೇರೆಗೆ ಪತಿ ಗಣೇಶರವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Also Read  ಕಲ್ಲುಗುಡ್ಡೆ: ಊಟ, ತಿಂಡಿ ಬಿಟ್ಟು ಮುಂದುವರಿದ ಮದ್ಯದಂಗಡಿ ವಿರೋಧಿ ಹೋರಾಟ ► ಕಡಬ ತಹಶಿಲ್ದಾರ್ ಗೆ ದಿಗ್ಬಂಧನ ವಿಧಿಸಿದ ಪ್ರತಿಭಟನಾಕಾರರು

error: Content is protected !!
Scroll to Top