ಕಡಬ: ಎಲೈಟ್ ಮೊಬೈಲ್ಸ್ ನಲ್ಲಿ ಲಕ್ಕೀ ಕೂಪನ್ ಡ್ರಾ ➤‌ ಅದೃಷ್ಟಶಾಲಿಗಳಿಗೆ ಬಹುಮಾನ ವಿತರಣೆ

(ನ್ಯೂಸ್‌ ಕಡಬ) newskadaba.com ಕಡಬ, ಆ.27. ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಎಲೈಟ್ ಮೊಬೈಲ್ಸ್ ನಲ್ಲಿ ಆಯೋಜಿಸಲಾಗಿದ್ದ ಲಕ್ಕೀ ಕೂಪನ್ ಹಾಗೂ ವಾಟ್ಸ್ಅಪ್ ಸ್ಟೇಟಸ್ ಗಾಗಿ ಆಯೋಜಿಸಲಾಗಿದ್ದ ಅದೃಷ್ಟಶಾಲಿಗಳ ಡ್ರಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಲಕ್ಕೀ ಕೂಪನ್ ನ ಪ್ರಥಮ ಬಹುಮಾನ ಸ್ಯಾಮ್‌ಸಂಗ್‌ ಎ03 ಮೊಬೈಲನ್ನು ಮನ್ವಿತ್ ಬಾಳುಗೋಡು ಪಡೆದುಕೊಂಡರು. ದ್ವಿತೀಯ ಬಹುಮಾನ ನೋಕಿಯಾ 105 ಮೊಬೈಲನ್ನು ಕುಟ್ರುಪ್ಪಾಡಿ ನಿವಾಸಿ ವರ್ಗೀಸ್ ತನ್ನದಾಗಿಸಿಕೊಂಡರು. 3 ಆಕರ್ಷಕ ಬಹುಮಾನ ಬ್ಲೂಟೂಥ್ ನೆಕ್ ಬ್ಯಾಂಡ್‌ಗಳನ್ನು ಕ್ರಮವಾಗಿ ಅಬ್ಬಾಸ್ ಮರ್ಧಾಳ, ನಿತೀಶ್ ಕುಮಾರ್ ಅಂತಿಬೆಟ್ಟು ಹಾಗೂ ಆಯಿಷಾ ಕೊರುಂದೂರು ವಿಜೇತರಾದರು. ಸಂಸ್ಥೆಯ ಪೋಸ್ಟರನ್ನು ಸ್ಟೇಟಸ್ ಹಾಕಿ 100ಕ್ಕಿಂತ ಹೆಚ್ಚು ಮಂದಿ ವೀಕ್ಷಿಸಿದ ಅದೃಷ್ಟಶಾಲಿ ನೌಫಲ್ ಆತೂರು ನೋಕಿಯಾ ಮೊಬೈಲ್ ತನ್ನದಾಗಿಸಿಕೊಂಡರು.

Also Read  ➤➤ ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ನವೆಂಬರ್ 22)

ಡ್ರಾ ಕಾರ್ಯಕ್ರಮವನ್ನು ಮರ್ಧಾಳ ಸೈಂಟ್ ಮೇರಿಸ್ ಚರ್ಚ್‌ನ ಧರ್ಮಗುರುಗಳಾದ ಫಾ| ಮ್ಯಾಥ್ಯೂ ಜಾನ್, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ಎನ್.ಕೆ., ಜೇಸಿಐ ಕಡಬ ಕದಂಬ ಘಟಕದ ಅಧ್ಯಕ್ಷ ಕಾಶೀನಾಥ್ ಗೋಗಟೆ ನೆರವೇರಿಸಿಕೊಟ್ಟರು.

error: Content is protected !!
Scroll to Top