ಕಡಬ: ಪ್ರಾಚೀನ ಮಣ್ಣಿನ ಪರಿಕರಗಳು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಆ. 27. ತಾಲೂಕಿನ ಎಡಮಂಗಲ ಗ್ರಾಮದ ಕಲ್ಲೆಂಬಿ ಎಂಬಲ್ಲಿ ಗುಡ್ಡದಲ್ಲಿ ಗುಂಡಿ ತೆಗೆಯುವ ವೇಳೆ ಗುಹೆ ಪತ್ತೆಯಾಗಿದ್ದು, ಅದರಲ್ಲಿ ಪ್ರಾಚೀನ ಮಣ್ಣಿನ ಪರಿಕರಗಳು ಪತ್ತೆಯಾಗಿವೆ.

 

ಕಲ್ಲೆಂಬಿ ವಿಶ್ವನಾಥ ಗೌಡ ಅವರ ಅಡಿಕೆ ತೋಟ ಮಾಡುವ ಉದ್ದೇಶದಿಂದ ಗುಂಡಿ ತೆಗೆಯುತ್ತಿದ್ದ ವೇಳೆ ಮಣ್ಣಿನಲ್ಲಿ ಸಡಿಲ ಭಾಗ ಗೋಚರಿಸಿದ್ದು, ಗುಹೆಯಾಕಾರದ ಮಾದರಿ ಪತ್ತೆಯಾಗಿದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಣ್ಣಿನ ಮಡಿಕೆ, ಬಟ್ಟಲು, ಸಣ್ಣ-ಪುಟ್ಟ ಪಾತ್ರೆಗಳ ಅವಶೇಷಗಳು ಪತ್ತೆಯಾಗಿವೆ. ಈ ಗುಹೆಯಲ್ಲಿ ಎರಡು ಅಂತರದ ಕೋಣೆಗಳಿರುವಂತೆ ಕಂಡುಬಂದಿದೆ. ಪರಿಕರ ಅಧ್ಯಯನ ಹಂತದಲ್ಲಿ ಹಿಂದಿನ ಕಾಲದಲ್ಲಿ ಉದ್ದೇಶಪೂರ್ವಕವಾಗಿ ಸಣ್ಣ ಮಾದರಿಯ ಗುಹೆ ತೋಡಿ ಪರಿಕರಗಳನ್ನು ಇದರಲ್ಲಿ ಹೂತು ಮುಚ್ಚಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

error: Content is protected !!

Join the Group

Join WhatsApp Group