ನೆರೆಯಿಂದ ಸಂಕಷ್ಟಕ್ಕೀಡಾದ ಹಾಫಿಲ್ ಪೇರಡ್ಕ ಕುಟುಂಬಕ್ಕೆ ತೆಕ್ಕಿಲ್ ಕುಟುಂಬಸ್ಥರಿಂದ 55 ಸಾವಿರ ರೂ. ಸಹಾಯಧನ ವಿತರಣೆ

(ನ್ಯೂಸ್ ಕಡಬ) newskadaba.com ಸಂಪಾಜೆ, ಆ. 27. ಇತ್ತೀಚೆಗೆ ಸಂಪಾಜೆ ಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದ ನೆರೆ ಪ್ರವಾಹಕ್ಕೆ ಸಿಲುಕಿ ಹಾನಿಯಾದ ಗೂನಡ್ಕ, ಪೇರಡ್ಕ ತೆಕ್ಕಿಲ್ ಸಫಿಯ ಅವರ ಮನೆಯು ಸಂಪೂರ್ಣ ಜಲಾವೃತಗೊಂಡು ಮನೆಯಲ್ಲಿದ್ದ ಎಲ್ಲಾ ವಸ್ತುಗಳು, ಬಟ್ಟೆ ಬರೆಗಳು ಕೊಚ್ಚಿ ಹೋಗಿ ಭಾರಿ ನಷ್ಟ ಉಂಟಾಗಿದ್ದು, ಇದನ್ನು ಮನಗಂಡು ತೆಕ್ಕಿಲ್ ಕುಟುಂಬಸ್ತರ ಒಕ್ಕೂಟವು ಸಂಗ್ರಹಿಸಿದ ರೂ. 55 ಸಾವಿರ ಮೊತ್ತದ ಸಹಾಯಧನವನ್ನು ತೆಕ್ಕಿಲ್ ಕುಟುಂಬಸ್ಥರ ಪರವಾಗಿ ಸಮಿತಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ರವರು ಗೂನಡ್ಕದ ಪೇರಡ್ಕ ಮನೆಯಲ್ಲಿ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ತೆಕ್ಕಿಲ್ ಕುಟುಂಬಸ್ಥರ ಒಕ್ಕೂಟದ ಉಪಾಧ್ಯಕ್ಷ ಟಿ.ಬಿ. ಅಬ್ದುಲ್ಲ ತೆಕ್ಕಿಲ್ ದರ್ಕಾಸ್ ಗೂನಡ್ಕ, ಸಲಹಾ ಸಮಿತಿ ಸದಸ್ಯರಾದ ಟಿ.ಎಂ.ರಝಾಕ್ ಹಾಜಿ ತೆಕ್ಕಿಲ್, ಕೌನ್ಸಿಲ್ ಸದಸ್ಯ ಜುರೈದ್ ತೆಕ್ಕಿಲ್ ಪೇರಡ್ಕ, ಕುಟುಂಬದ ಹಿರಿಯರಾದ ಟಿ.ಎಂ ಉಮ್ಮರ್ ತೆಕ್ಕಿಲ್ ಪೇರಡ್ಕ, ಸಾಧುಮಾನ್ ತೆಕ್ಕಿಲ್ ಪೇರಡ್ಕ, ಉಸ್ಮಾನ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು.

Also Read  ರಾಜ್ಯದ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ➤ ಸಿಎಂ ಬೊಮ್ಮಾಯಿ ಘೋಷಣೆ..!

error: Content is protected !!
Scroll to Top