ಟೋಲ್’ನ ಮಹಿಳಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಕಾರು ಚಾಲಕ ➤‌ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಭೋಪಾಲ್, ಆ. 22. ವ್ಯಕ್ತಿಯೊಬ್ಬ ಟೋಲ್ ನಲ್ಲಿದ್ದ ಮಹಿಳಾ ಉದ್ಯೋಗಿಗೆ ಕಪಾಳಮೋಕ್ಷ ಮಾಡಿದ ಘಟನೆ ಮಧ್ಯಪ್ರದೇಶದ ರಾಜಗಢ-ಭೋಪಾಲ್ ರಸ್ತೆಯಲ್ಲಿನ ಕಚ್ನಾರಿಯಾ ಟೋಲ್ ಪ್ಲಾಝಾದಲ್ಲಿ ನಡೆದಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಸ್ಥಳೀಯ ನಿವಾಸಿಯೋರ್ವರ ಕಾರಿನಲ್ಲಿ ಟೋಲ್ ಪಾವತಿಸಲು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಹೊಂದಿರಲಿಲ್ಲ. ಆದರೆ ಮಹಿಳೆ ಟೋಲ್ ಪಾವತಿಸದೇ ವಾಹನ ಹೋಗಲು ಬಿಡುವುದಿಲ್ಲ ಎಂದಿದ್ದಕ್ಕೆ ಕೋಪಗೊಂಡ ರಾಜ್ ಕುಮಾರ್, ತಾನು ಸ್ಥಳೀಯನಾಗಿದ್ದು ಟೋಲ್ ನಿಂದ ವಿನಾಯಿತಿ ನೀಡಬೇಕು ಎಂದು ಹೇಳಿದ್ದಾನೆ. ಆದರೆ ಸ್ಥಳೀಯನೆಂದು ಗುರುತಿಸಲು ಯಾವುದೇ ದಾಖಲೆಗಳೂ ಇರದೇ ಇದ್ದು, ಇವರಿಬ್ಬರ ಮಾತಿನ ಚಕಮಕಿ ನಡೆದು ಚಾಲಕ ಮಹಿಳೆ ಮೇಲೆ ದಾಳಿ ಮಾಡಿದ್ದಾನೆ ಎನ್ನಲಾಗಿದೆ.

Also Read  ಚಾರ್ಮಾಡಿ ಘಾಟ್ ಎರಡನೇ ತಿರುವಿನಲ್ಲಿ ರಸ್ತೆ ಬಿರುಕು..!

 

error: Content is protected !!
Scroll to Top