ಮಂಗಳೂರು: ಬಿಜೆಪಿ ಸಕ್ರಿಯ ಕಾರ್ಯಕರ್ತ, ವಕ್ಫ್ ಬೋರ್ಡ್ ಸದಸ್ಯನಿಗೆ ಜೀವಬೆದರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 20. ಬಿಜೆಪಿ ಕಾರ್ಯಕರ್ತ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಖಾಲಿದ್ ನಂದಾವರ ರವರು ತನಗೆ ಜೀವಬೆದರಿಕೆ ಇದೆ ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್ ಪಿಗೆ ದೂರು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಖಾಲಿದ್ ನಂದಾವರ ಅವರು ಬಿಜೆಪಿಯ ಕಾರ್ಯಕರ್ತ ಹಾಗೂ ಆರ್ ಟಿಐ ಕಾರ್ಯಕರ್ತ. ಇವರು ಬಂಟ್ವಾಳದಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡ, ಮರಳುಗಾರಿಕೆ ಸೇರಿ ಹಲವು ಅಕ್ರಮಗಳ ವಿರುದ್ಧ ಆಯಾ ಇಲಾಖೆಗೆ ಲಿಖಿತ ದೂರು ನೀಡುತ್ತಿದ್ದು, ಈ ಬಗ್ಗೆ ಅವರಿಗೆ ಕೊಲ್ಲಿ ರಾಷ್ಟ್ರಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದವು. ಇದರ ಕುರಿತು ಈ ಹಿಂದೆ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು. ಆಗಸ್ಟ್ 18 ರಂದು ಖಾಲಿದ್ ಅವರ ಸ್ನೇಹಿತರೊಬ್ಬರು ಕರೆ ಮಾಡಿ, ‘ನೀವು ಸ್ವಲ್ಪ ದಿನ ಹುಷಾರಾಗಿರಿ. ನಿಮ್ಮ ಮೇಲೆ ದಾಳಿ ನಡೆಸುವ ಸಂಭವ ಇದೆ’ ಎಂದು ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆ ಖಾಲಿದ್ ಅವರು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿಗೆ ದೂರು ನೀಡಿದ್ದಾರೆ.

Also Read  ಕಡಬದ ಮದ್ಯದಂಗಡಿಯಲ್ಲಿ ಹೆಚ್ಚುವರಿ ದರ ವಸೂಲಿ ➤ ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ದಾಳಿ ➤ ಮಾರುವೇಶದಲ್ಲಿ ಕಾರ್ಯಾಚರಣೆ ನಡೆಸಿದ ಕಡಬದ ಪತ್ರಕರ್ತ

error: Content is protected !!
Scroll to Top