ಕಡಬ: ರಾಮಕುಂಜ ಶಾರದಾಂಬ ಭಜನಾ ಮಂದಿರದಿಂದ ತೆಂಗಿನ ಕಾಯಿ ಕಳ್ಳತನ- ದೂರು ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಆ. 20. ರಾಮಕುಂಜ ಗ್ರಾಮದ ಶಾರದಾಂಬ ಭಜನಾ ಮಂದಿರದಿಂದ ತೆಂಗಿನ ಕಾಯಿ ಕಳ್ಳತನವಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಭಜನಾ ಮಂದಿರದ ರಂಗ ಮಂದಿರದಲ್ಲಿದ್ದ ಸುಮಾರು 100 ತೆಂಗಿನ ಕಾಯಿಗಳು ಕಳವಾಗಿದ್ದು, ಕಳ್ಳತನ ನಡೆಸಿದವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಾರದಾಂಬ ಭಜನಾ ಮಂದಿರದ ಅಧ್ಯಕ್ಷ ಪ್ರದೀಪ್‌ರವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿ ಆಗ್ರಹಿಸಿದ್ದಾರೆ.

Also Read  ಬಂಟ್ವಾಳ: ಲಾರಿಯಡಿಗೆ ಬಿದ್ದು ಮಹಿಳೆ ಮೃತ್ಯು

error: Content is protected !!
Scroll to Top