ಮಂಗಳೂರು: ಕೊಲೆಯತ್ನ ➤‌ ಓರ್ವನ ಸ್ಥಿತಿ ಚಿಂತಾಜನಕ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 20. ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಇಲ್ಲಿನ ಹೊರವಲಯದ ವಳಚ್ಚಿಲ್ ಎಂಬಲ್ಲಿ ನಡೆದಿದೆ.

ಚೂರಿ ಇರಿತ್ಕೊಳಗಾದವನನ್ನು ಮಿಫ್ತಾಹ್ ಎಂದು ಗುರುತಿಸಲಾಗಿದೆ. ಈತ ಶುಕ್ರವಾರದಂದು ರಾತ್ರಿ ಮನೆಗೆ ಸಾಮಾನು ತರಲು ಅಂಗಡಿಗೆ ತೆರಳಿದ್ದ ವೇಳೆ ಈತನನ್ನು ತಡೆದ ಗ್ಯಾಂಗ್ ಒಂದು ಮಾರಕಾಸ್ರ್ತಗಳಿಂದ ಹಲ್ಲೆ ನಡೆಸಲು ಯತ್ನಿಸಿದ್ದು, ಈ ಸಂದರ್ಭ ತಡೆಯಲು ಬಂದ ಯುವಕನ ಮಾವ ಆಸೀಫ್(30) ಎಂಬವರ ಮೇಲೆ ತಂಡ ಏಕಾಏಕಿ ತಲವಾರು ಹಾಗೂ ಇನ್ನಿತರ ಮಾರಕಾಸ್ರ್ತಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ. ಘಟನೆಯಲ್ಲಿ ಆಸೀಫ್ ಗಂಭೀರ ಗಾಯಗೊಂಡಿದ್ದು ನಗರದ ಒಮೇಗಾ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ದಾಖಲಾಗಿದ್ದಾರೆ. ಈ ಕುರಿತು ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಉಪಚುನಾವಣೆ ಕಾಂಗ್ರೆಸ್ ಸಮರ್ಥವಾಗಿ ಎದುರಿಸಲಿದೆ - ಸಿಎಂ

error: Content is protected !!
Scroll to Top