ಸುರತ್ಕಲ್: ಕತ್ತಿಯಿಂದ ಹಲ್ಲೆ- ಬಸ್ಸಿಗೆ ಕಲ್ಲು ತೂರಾಟ ➤‌ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುರತ್ಕಲ್, ಆ. 19. ವ್ಯಕ್ತಿಯೋರ್ವ ಕತ್ತಿಯಿಂದ ಇಬ್ಬರಿಗೆ ಗಾಯಗೊಳಿಸಿದ್ದಲ್ಲದೆ, ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಶುಕ್ರವಾರದಂದು ಇಲ್ಲಿನ ಕಾನಾ ಸಮೀಪ ನಡೆದಿದೆ.


ಗಾಯಾಳು ಹಾಗೂ ಕತ್ತಿ ಬೀಸಿದ ವ್ಯಕ್ತಿಗೂ ಗಾಯವಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆನ್ನಲಾಗಿದೆ. ಸ್ಥಳಕ್ಕೆ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಆರೋಪಿಯು ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಎಂದು ತಿಳಿದು ಬಂದಿದೆ. ಸುರತ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

Also Read  ಕೋಡಿಕಲ್‍ನಲ್ಲಿ ಶಾಲಾ ಪ್ರಾರಂಭೋತ್ಸವ

error: Content is protected !!
Scroll to Top