ಲ್ಯಾಂಡಿಂಗ್ ವೇಳೆ ವಿಮಾನಗಳೆರಡರ ನಡುವೆ ಢಿಕ್ಕಿ ➤‌ ಹಲವು ಸಾವು- ನೋವುಗಳ ಶಂಕೆ…!

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಆ. 19. ಲ್ಯಾಂಡಿಂಗ್ ವೇಳೆ ವಿಮಾನಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿದ ಘಟನೆ ಕ್ಯಾಲಿಫೋರ್ನಿಯಾದ ವ್ಯಾಟ್ಸನ್‌ ವಿಲ್ಲೆಯಲ್ಲಿ ನಡೆದಿದೆ.

ವ್ಯಾಟ್ಸನ್‌ ವಿಲ್ಲೆ ಮುನ್ಸಿಪಲ್ ಏರ್‌‌ಪೋರ್ಟ್‌ನಲ್ಲಿ ಲ್ಯಾಂಡಿಂಗ್‌ ಮಾಡಲು ಯತ್ನಿಸುತ್ತಿದ್ದ ವೇಳೆ ಸಿಂಗಲ್-ಎಂಜಿನ್ ಸೆಸ್ನಾ 152 ಮತ್ತು ಅವಳಿ-ಎಂಜಿನ್ ಸೆಸ್ನಾ 340 ನಡುವೆ ಪರಸ್ಪರ ಢಿಕ್ಕಿಯಾಗಿದೆ. ವಿಮಾನಗಳೆರಡರಲ್ಲಿ ಒಟ್ಟು 340 ಮಂದಿ ಪ್ರಯಾಣಿಕರಿದ್ದು, ಹಲವರು ಮೃತಪಟ್ಟಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆದರೆ ಸಾವು-ನೋವುಗಳ ಅಧಿಕೃತ ಮಾಹಿತಿಯನ್ನು ಈವರೆಗೆ ನೀಡಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Also Read  ಒಮಾನ್ ದೇಶಕ್ಕೆ ತೆರಳಲು ಇಚ್ಛಿಸುವವರಿಗೆ ಗುಡ್ ನ್ಯೂಸ್: ಭಾರತ ಸೇರಿದಂತೆ 103 ದೇಶದವರಿಗೆ ಉಚಿತ ವೀಸಾ ಘೋಷಣೆ

error: Content is protected !!
Scroll to Top