ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ವಿಧೇಯಕ ವಿರೋಧಿಸಿ ತಾರಕಕ್ಕೇರಿದ ವೈದ್ಯರ ಮುಷ್ಕರ ► ನಾಳೆಯಿಂದ OPD ಬಂದ್

(ನ್ಯೂಸ್ ಕಡಬ) newskadaba.com ಬೆಳಗಾವಿ, ನ.15. ರಾಜ್ಯದಾದ್ಯಂತ ನಡೆಯುತ್ತಿರುವ ವೈದ್ಯರ ಮುಷ್ಕರ ನಾಳೆಯಿಂದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ತಿದ್ದುಪಡಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಐಎಂಎ, ಪಾನಾ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಐದು ಸಂಘಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ನಾಳೆಯಿಂದ ಓಪಿಡಿ ವ್ಯವಸ್ಥೆ ಕೂಡ ಸ್ಥಗಿತಗೊಳ್ಳಲಿದೆ ಎಂಬ ಮಾಹಿತಿ ನೀಡಿದೆ.

ಇದರಿಂದ ರಾಜ್ಯದಾದ್ಯಂತ ರೋಗಿಗಳು ಇನ್ನಷ್ಟು ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ. PHANA ಚುನಾಯಿತ ಅಧ್ಯಕ್ಷ ಡಾ.ಜಯಣ್ಣ ಮಾತನಾಡಿದ್ದು, ಕಾಯಿದೆ ತಿದ್ದುಪಡಿ ಮಾಡದಂತೆ ಎಷ್ಟೇ ಮನವಿ ಮಾಡಿದ್ರೂ ಸರ್ಕಾರ ಕೇರ್ ಮಾಡುತ್ತಿಲ್ಲ. ಹೀಗಾಗಿ ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದೆ. ಇದಕ್ಕೆ ಬೆಂಬಲ ಸೂಚಿಸಲು ಬೆಂಗಳೂರಿನ ಘಟಕವು ಶುಕ್ರವಾರದಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ ಎಂದಿದ್ದಾರೆ.

Also Read  ಕಾರು ಮತ್ತು ಕಂಟೈನರ್ ನಡುವೆ ಅಪಘಾತ ➤ ಪ್ರಾಧ್ಯಾಪಕನೋರ್ವ ಮೃತ್ಯು

ನಾಳೆಯಿಂದ ಬೆಂಗಳೂರಿನಲ್ಲಿ ತುರ್ತು ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಹೊರತುಪಡಿಸಿ ಎಲ್ಲಾ ಒಪಿಡಿ ಸ್ಥಗಿತಗೊಳ್ಳಲಿದೆ. ಸರ್ಕಾರ ಮಸೂದೆ ಕೈಬಿಡೋವರೆಗೂ ಹೋರಾಟ ನಡೆಯಲಿದೆ ಎಂದು ಮುಷ್ಕರ ನಿರತರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ರಾಜ್ಯದಾದ್ಯಂತ ವೈದ್ಯರ ಮುಷ್ಕರಕ್ಕೆ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ.

ಇನ್ನು ನಾಳೆಯಿಂದ ಓಪಿಡಿ ಕೂಡಾ ಬಂದ್​ ಆಗಲಿರುವುದರಿಂದ ಸಾವು -ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಇನ್ನೊಂದೆಡೆ ಖಾಸಗಿ ವೈದ್ಯರ ಮುಷ್ಕರದಿಂದ ಕಂಗಾಲಾಗಿರುವ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಆಗುವ ಅನಾನುಕೂಲತೆ ತಪ್ಪಿಸುವ ಉದ್ದೇಶದಿಂದ ನಾಳೆಯಿಂದ ಸರ್ಕಾರಿ ವೈದ್ಯರು ಹಾಗೂ ಸಿಬ್ಬಂದಿಗಳ ರಜೆ ರದ್ದುಗೊಳಿಸಿ ಆದೇಶ ಹೊರಡಿಸಿದೆ.

Also Read  Days Associated With Play 2024 Involves Playstation Store Ps Blog

error: Content is protected !!
Scroll to Top