ಸವಣೂರು-ಮಾಡಾವು ರಸ್ತೆ ಕಾಮಗಾರಿ ಹಿನ್ನೆಲೆ ➤‌ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮನವಿ

(ನ್ಯೂಸ್ ಕಡಬ) newskadaba.com ಫುತ್ತೂರು, ಆ. 17. ತಾಲೂಕಿನ ಸವಣೂರು-ಮಾಡಾವು ಸಿದ್ಧಮೂಲೆ ರಸ್ತೆ ಕಾಂಕ್ರೀಟಿಕರಣ ನಡೆಯುತ್ತಿರುವ ಹಿನ್ನೆಲೆ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ರಸ್ತೆಯಾಗಿ ಸವಣೂರು- ಬಂಬಿಲ ರಸ್ತೆಯಲ್ಲಿ ಸಂಚರಿಸಲು ವ್ಯವಸ್ಥೆಗೊಳಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯು ಇಲ್ಲಿನ ಬೊಳಿಕ್ಕಲ ಎಂಬಲ್ಲಿಂದ ಆರಂಭಗೊಳ್ಳಲಿದ್ದು, ಈ ಹಿನ್ನೆಲೆ ಆ.18ರಿಂದ ಸೆ.17ರ ತನಕ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿದೆ. ಈ ಅವಧಿಯಲ್ಲಿ ಸಾರ್ವಜನಿಕ ಲಘು ವಾಹನಗಳು ಬದಲಿ ರಸ್ತೆಯ ಮೂಲಕ ಅಂದರೆ ಸವಣೂರಿನಿಂದ ಬಂಬಿಲ-ಮಂಜುನಾಥ ನಗರ-ಅಂಕತ್ತಡ್ಕ ರಸ್ತೆಯಲ್ಲಿ ಸಂಚರಿಸಿ, ಕಾಮಗಾರಿ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ರಾಮಕುಂಜ: ವಿಜ್ಞಾನ ಹಾಗೂ ಗಣಿತ ಪ್ರಯೋಗಾಲಯ ಉದ್ಘಾಟನೆ

error: Content is protected !!
Scroll to Top