ಕಡಬ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್ ➤‌ 14 ದಿನಗಳ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಆ. 17. ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದ ಪ್ರಕರಣದ ಆರೋಪಿ ಕುಂತೂರಿನ ರಾಜಿಕ್ ಎಂಬಾತನ್ನು ಕಡಬ ಪೊಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ.

 

ಈತನ ವಿರುದ್ದ 2012 ರಲ್ಲಿ ಕಡಬ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆ ಕೋರ್ಟಿನಲ್ಲಿ ನಡೆಯುತ್ತಿತ್ತಾದರೂ, ಆರೋಪಿ ರಾಜಿಕ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದರಿಂದ ಪುತ್ತೂರಿನ ಸೆಷನ್ ಕೋರ್ಟ್ ಈತನ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು. ಇದೀಗ ಕುಂತೂರಿನ ರಾಜಿಕ್ ನನ್ನು ಕಡಬ ಪೊಲೀಸರು ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ರಾಜಿಕ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ಕಾರ್ಯಚರಣೆಯಲ್ಲಿ ಕಡಬ ಎಸ್.ಐ ಆಂಜನೇಯ ರೆಡ್ಡಿ ಹೆಡ್ ಕಾನ್ಸ್ಟೇಬಲ್ ಗಳಾದ ಭವಿತ್ ರೈ ಹಾಗೂ ಹರೀಶ್, ಕಾನ್ಸ್ಟೇಬಲ್ ಗಳಾದ ಮಹೇಶ್ ಹಾಗೂ ಸಿರಾಜುದ್ದೀನ್ ಭಾಗವಹಿಸಿದ್ದರು.

Also Read  ಎರಡು ಮದುವೆಯಾಗಿ ಐವರು ಮಕ್ಕಳಿದ್ದರೂ ಕಡಿಮೆಯಾಗಿಲ್ಲ ಚಪಲ ➤ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಯತ್ನದ ಆರೋಪಿ ಬಂಧನ

error: Content is protected !!
Scroll to Top