ಬೆಳ್ಳಾರೆ: ಮಸೂದ್ ಹತ್ಯೆ ಪ್ರಕರಣ ➤‌ ಅರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 17. ಗುಂಪಿನಿಂದ ಹಲ್ಲೆಗೊಳಗಾಗಿ ಮೃತಪಟ್ಟ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಳಂಜದ ಮಸೂದ್‌ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಎಲ್ಲಾ ಆರೋಪಿಗಳಿಗೆ ವಿಧಿಸಲಾಗಿದ್ದ ನ್ಯಾಯಾಂಗ ಬಂಧನವನ್ನು ಆ. 29ರ ವರೆಗೆ ವಿಸ್ತರಿಸಿ ಸುಳ್ಯ ನಾಯಾಲಯವು ಆದೇಶ ನೀಡಿದೆ.

ಆರೋಪಿಗಳಾದ ಅಭಿಲಾಷ್‌, ಸುನಿಲ್‌ ಕೆ., ಸುಧೀರ್‌, ಶಿವಪ್ರಸಾದ್‌, ರಂಜಿತ್‌ ಬಿ., ಸದಾಶಿವ ಪೂಜಾರಿ, ರಂಜಿತ್‌, ಭಾಸ್ಕರ ಕೆ.ಎಂ. ಎಂಬವರ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಕಸ್ಟಡಿಯಲ್ಲಿದ್ದರು. ಇದೀಗ ಮಂಗಳವಾರ ಕಸ್ಟಡಿಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮತ್ತೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

Also Read  Breaking news ಕೊರೋನಗೆ ಮತ್ತೊಂದು ಬಲಿ, ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10 ಕ್ಕೆ ಏರಿಕೆ

error: Content is protected !!