ಮಂಗಳೂರು: ದನ ಕಳವು ಪ್ರಕರಣ ➤‌ ಐವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 17. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ದನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ ಘಟನೆ ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಬಜಾಲ್‌ ಗ್ರಾಮದ ದೋಟ ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ಮಂಗಳೂರಿನ ಗುರುನಗರ ಬಂಗ್ಲೆಗುಡ್ಡೆಯ ಮಹಮ್ಮದ್‌ ಅಶ್ಪಾಕ್ ಆಲಿಯಾಸ್‌ ಶಮೀರ್‌ ಯಾನೆ ಚಮ್ಮಿ (22), ಗುರುಪುರ ಅಡ್ಡೂರು ಆದ್ಯಪಾಡಿ ಅಝರುದ್ದೀನ್‌ ಅಲಿಯಾಸ್‌ ಅಜರ್‌ (31), ಬಜಾಲ್‌ ಪಡ್ಪುವಿನ ಸುಹೈಲ್‌ (19), ಬಜಾಲ್‌ ಪಕ್ಕಲಡ್ಕದ ಮೊಹಮ್ಮದ್‌ ಅಫ್ರೀದ್‌ (25) ಮತ್ತು ಬಜಾಲ್‌ ಕಟ್ಟಪುಣಿಯ ಶಾಹೀದ್‌ ಆಲಿಯಾಸ್‌ ಚಾಯಿ (19) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ ಮಾರುತಿ ಕಾರು, ಕತ್ತಿ ಮತ್ತು ಹಗ್ಗಗಳನ್ನು ವಶಪಡಿಸಲಾಗಿದೆ. ದೋಟ ಮನೆ ಅಶ್ವಿ‌ನ್‌ ಎಂಬವರು ಜುಲೈ 20ರಂದು ಸಂಜೆ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದು, ಮರುದಿನ ಮುಂಜಾನೆ ಸುಮಾರು 3.30ಕ್ಕೆ ದನ ಕೂಗಿದ ಸದ್ದು ಕೇಳಿ ಮನೆಯವರು ನೋಡಿದಾಗ ಕೊಟ್ಟಿಗೆಯಲ್ಲಿದ್ದ ಸುಮಾರು 40,000 ರೂ. ಮೌಲ್ಯದ ಹಸು ಕಾಣೆಯಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.

Also Read  ➤ ದಾವುದ್ ಇಬ್ರಾಹಿಂ ಗೆ ಗುಟ್ಕಾ ಉತ್ಪಾದಕ ಘಟಕ ಸ್ಥಾಪಿಸಲು ನೆರವು ➤ ಮೂವರು ಉದ್ಯಮಿಗಳಿಗೆ 10 ವರ್ಷ ಜೈಲು!

error: Content is protected !!
Scroll to Top