ಗ್ರಾ.ಪಂ.ಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಸೃಷ್ಟಿ ► ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ನ.15. ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗೆ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಸೃಷ್ಠಿಸಲಾಗಿದ್ದು, ಮಂಗಳೂರು ತಾಲೂಕಿನ 55 ಗ್ರಾಮ ಪಂಚಾಯತ್‍ಗಳಿಗೆ ತಲಾ ಒಂದರಂತೆ ಡಾಟಾ ಎಂಟ್ರಿ ಆಪರೇಟರುಗಳನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಯಾವ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಲು ಬಯಸಿರುವರೋ ಆ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯವರಿಗೆ ಅರ್ಜಿಯನ್ನು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದ್ದು, ಅರ್ಜಿ ಶುಲ್ಕ ರೂ. 150/- ರ ಡಿ.ಡಿ. ಪೋಸ್ಟಲ್ ಆರ್ಡರ್ ಮೂಲಕ ಪಾವತಿಸಬೇಕು.

Also Read  ಕುಂತೂರು: ಹೋಟೇಲ್‌ಗಳಿಗೆ ನುಗ್ಗಿದ ಕಳ್ಳರು ► ಚಿಲ್ಲರೆ ದುಡ್ಡಿನೊಂದಿಗೆ ಹರಿಕೆ‌ ಡಬ್ಬಿಯನ್ನು ಹೊತ್ತೊಯ್ದ ಕಳ್ಳರು

ಸರ್ಕಾರಿ ಆದೇಶದ ಪ್ರತಿ ಅರ್ಜಿಯ ನಮೂನೆ ಮತ್ತು ವೇಳಾ ಪಟ್ಟಿಯ ವಿವರವನ್ನು ವೆಬ್‍ಸೈಟ್ (http://rdpr.kar.nic.in) ನಲ್ಲಿ ಹಾಗೂ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳಿಂದ ಪಡೆಯಬಹುದಾಗಿದೆ ಎಂದು ಮಂಗಳೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top