ನಾಲ್ವರ ಹಂತಕ ಪ್ರವೀಣ್ ಬಿಡುಗಡೆ ಸಾಧ್ಯತೆ ಕಡಿಮೆ ➤‌ ಎಸ್ಪಿ ಋಷಿಕೇಶ್ ಸೋನಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 15. ಚಿನ್ನಾಭರಣಕ್ಕಾಗಿ ನಾಲ್ವರು ಸಂಬಂಧಿಕರನ್ನೇ ಹತ್ಯೆ ಮಾಡಿದ ಪ್ರಕರಣದಲ್ಲಿ ಸುದೀರ್ಘ 28 ವರ್ಷಗಳ ಜೈಲು ವಾಸದಲ್ಲಿರುವ ಪ್ರವೀಣ್ ಕುಮಾರ್ ಎಂಬಾತನ ಬಿಡುಗಡೆ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ.


ಸನ್ನಡತೆಯ ಆಧಾರದಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭ ಬಿಡುಗಡೆಯಾಗುವ ಕೈದಿಗಳ ಪೈಕಿ ಪ್ರವೀಣ್‌ ಕುಮಾರ್‌ ಹೆಸರು ಕೂಡಾ ಸೇರ್ಪಡೆಯಾಗಿತ್ತು. ಈತನ ಬಿಡುಗಡೆಗೂ ಮುನ್ನ ಪ್ರವೀಣ್ ಬಗ್ಗೆ ವರದಿ ನೀಡುವಂತೆ ಕಾರಾಗೃಹ ಇಲಾಖೆಯು ದ.ಕ.ಜಿಲ್ಲಾ ಪೊಲೀಸರಿಂದ ವರದಿಯನ್ನು ಕೇಳಿತ್ತು. ಈ ಹಿನ್ನೆಲೆ ಪ್ರವೀಣ್ ಕುಟುಂಬಸ್ಥರ ಹೇಳಿಕೆಯನ್ನು ಪಡೆದುಕೊಳ್ಳಲಾಗಿತ್ತು. ಹೇಳಿಕೆಯ ಪ್ರಕಾರ ‘ನಾನು ಹೊರಗಡೆ ಬಂದ್ರೆ ಇನ್ನೂ ನಾಲ್ಕು ಜನರನ್ನು ಕೊಲೆ ಮಾಡ್ತೇನೆ ಎಂದು ಈಗಾಗಲೇ ಹೇಳಿದ್ದರಿಂದ ಆತನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ’ ಎಂದು ಅಪರಾಧಿ ಪ್ರವೀಣ್‌ ಕುಮಾರ್‌ ಪತ್ನಿ, ಸಹೋದರ ಮತ್ತು ಕೊಲೆಯಾದ ಅಪ್ಪಿ ಶೇರಿಗಾರ್ತಿಯ ಪುತ್ರ ಸೀತಾರಾಮ ಸಹಿತ ಕುಟುಂಬಸ್ಥರು, ಜನಪ್ರತಿನಿಧಿಗಳು, ವಿವಿಧ ಸ್ತರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರಿಂದ ಪ್ರವೀಣ್‌ ಬಿಡುಗಡೆ ಸಾಧ್ಯತೆ ತುಂಬಾ ಕಡಿಮೆ ಇದೆ. “ಕುಟುಂಬಸ್ಥರ ಆಕ್ಷೇಪದ ಹಿನ್ನೆಲೆ ಪ್ರವೀಣ್‌ನನ್ನು ಜೈಲಿನಿಂದ ಬಿಡುಗಡೆ ಬೇಡ ಎಂಬುದಾಗಿ ಇಲಾಖೆಗೆ ವರದಿ ನೀಡಿದ್ದೇವೆ. ಹಾಗಾಗಿ ಬಿಡುಗಡೆ ಸಾಧ್ಯತೆ ಕಡಿಮೆ” ಎಂದು ದ.ಕ. ಜಿಲ್ಲಾ ಎಸ್‌ಪಿ ಹೃಷಿಕೇಶ್‌ ಸೋನಾವಣೆ ಪ್ರತಿಕ್ರಿಯಿಸಿದ್ದಾರೆ.

Also Read  ಸಿಎಂ ಯಡಿಯೂರಪ್ಪರ ರಾಜೀನಾಮೆ ವಿಚಾರ ➤ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾದರೂ ಏನು..?

error: Content is protected !!
Scroll to Top