ಗೋಪಾಲಪುರ ಸಂತ ಅಂತೋನಿ ಚರ್ಚ್ ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಕೊಡಗು, ಆ. 15. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ಗೋಪಾಲಪುರದ ಸಂತ ಅಂತೋನಿ ಚರ್ಚ್ ನಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂತ ಅಂತೋನಿ ಚರ್ಚ್ ಗೋಪಾಲಪುರ ದಲ್ಲಿ ಬೆಳಿಗ್ಗೆ 9ಗಂಟೆಗೆ ಫಾದರ್ ಸನ್ನಿ ರವರಿಂದ ದೇಶದ ಜನತೆಗಾಗಿ ಹಾಗೂ ದೇಶದ ಒಳಿತಿಗಾಗಿ ಪೂಜೆ ಅರ್ಪಿಸಲಾಯಿತು. ನಂತರ ಫಾದರ್ ಸನ್ನಿ ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನಾವು 75ನೇ ಸ್ವಾತಂತ್ರ್ಯೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು ಹಾಗೂ ದೇಶದ ಜನತೆಗೆ ಒಳ್ಳೆಯದಾಗಲಿ ಹಾಗೂ ಸ್ವತಂತ್ರಕ್ಕಾಗಿ ಬಲಿದಾನಗೈದ ಮಹನೀಯರನ್ನು ನಾವು ಸ್ಮರಿಸಬೇಕು ಅವರ ಆದರ್ಶಗಳನ್ನು ಪಾಲಿಸಬೇಕೆಂದು ಹಿತನುಡಿ ಹೇಳಿದರು. ಇದೇ ಸಂದರ್ಭದಲ್ಲಿ ಬಸವನಕೊಪ್ಪದ ಜೋಸೆಫ್ ರವರು ನೆರೆದಿದ್ದ ಜನರಿಗೆ ಸಿಹಿ ಹಂಚಿದರು. ಕೊಡ್ಲಿಪೇಟೆಯ ಸೆಂಟ್ ಆ್ಯನ್ಸ್ ಕಾನ್ವೆಂಟ್ ಸಿಸ್ಟರ್ಸ್ ಗಳು ಪಾಲ್ಗೊಂಡಿದ್ದರು ಹಾಗೂ ಬೀಟಿಕಟ್ಟೆ, ಗೋಪಾಲಪುರ, ಬಸವನಕೊಪ್ಪ, ಕಳಲೆ ಹೊಸೂರು, ಶನಿವಾರಸಂತೆ ಮೊದಲಾದ ಕಡೆಯಿಂದ ಬಂದಿದ್ದ ಭಕ್ತಾದಿಗಳು 75 ನೇ ಸ್ವಾತಂತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.

Also Read  ನಮ್ಮ ಬಳಿ ಇನ್ನೂ ಸಮಯವಿದೆ; ಬಜೆಟ್ ಘೋಷಣೆಗಳನ್ನು ಈಡೇರಿಸುತ್ತೇವೆ        ➤ ಸಿಎಂ ಬೊಮ್ಮಾಯಿ…!!!

error: Content is protected !!
Scroll to Top