ಮರ್ಧಾಳ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ‘ಪ್ರೇರಣಾ ಕಾರ್ಯಾಗಾರ & ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ➤‌ ಜೇಸಿಐ ಕಡಬ ಕದಂಬ ಸಾಥ್

(ನ್ಯೂಸ್ ಕಡಬ) newskadaba.com ಕಡಬ, ಆ.13. ಜೇಸಿಐ ಕಡಬ ಕದಂಬ, ಸೈಂಟ್ ಮೇರಿಸ್ ಪ್ರೌಢಶಾಲೆ ಮರ್ಧಾಳ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪ್ರೇರಣಾ ಕಾರ್ಯಾಗಾರ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಯು ಇತ್ತೀಚೆಗೆ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜೇಸಿಐ ಭಾರತದ ವಲಯ 15ರ ಉಪಾಧ್ಯಕ್ಷೆ ಸ್ವಾತಿ ಜಗನ್ನಾಥ್ ರೈ ಉದ್ಘಾಟಿಸಿದರು. ಕಂಪ್ಯೂಟರ್ ಲ್ಯಾಬ್ ನ್ನು ಕಡಬದ ಗ್ಲೋಬ್ ಪ್ರಿಂಟರ್ಸ್ ಮಾಲಕ ದಯಾನಂದ ಉಂಡಿಲ ಉದ್ಘಾಟಿಸಿದರು. ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ ಕಾಶೀನಾಥ್ ಗೋಗಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲೆಯ ಸಂಚಾಲಕ ರೆ.ಫಾ. ಸುಜಯ್ ಜಾನ್, ಮರ್ಧಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಕೋಡಂದೂರು ಭಾಗವಹಿಸಿದ್ದರು.

Also Read  ರಸ್ತೆ ಬದಿಯಲ್ಲಿದ್ದ ಲೈಟ್ ಕಂಬಕ್ಕೆ ಬೈಕ್ ಢಿಕ್ಕಿ ➤ ಸವಾರ ದುರ್ಮರಣ

ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ತರಬೇತಿ ಕಾರ್ಯಾಗಾರವನ್ನು ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ, ಜೇಸಿಐ ವಲಯ ಉಪಾಧ್ಯಕ್ಷೆ ಸ್ವಾತಿ ಜಗನ್ನಾಥ್ ರೈ ಹಾಗೂ ಜೇಸಿಐ ಭಾರತದ ರಾಷ್ಟ್ರೀಯ ತರಬೇತುದಾರ, ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಭಟ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಜೇಸಿಐ ಕಡಬ ಕಂದಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ., ಜೇಸಿಐ ಕಡಬ ಕದಂಬ ಘಟಕದ ನಿಕಟಪೂರ್ವಾಧ್ಯಕ್ಷ ತಿರುಮಲೇಶ್ ಭಟ್, ಶಾಲಾ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ವೀರಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಸ್ಲೀಂ ಮರ್ಧಾಳ, ಜೇಸಿಐ ಕಡಬ ಕದಂಬ ಘಟಕದ ಕಾರ್ಯದರ್ಶಿ ಅನೀಶ್ ಲೋಬೋ, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಚಾಕೋ ಮೊದಲಾದವರು ಉಪಸ್ಥಿತರಿದ್ದರು.

Also Read  ಸಿಡಿಮದ್ದು: ಸಾಕುಪ್ರಾಣಿಗಳ ಕುರಿತು ಮುಂಜಾಗ್ರತಾ ಕ್ರಮಕ್ಕೆ ಇಲಾಖೆ ಸೂಚನೆ

 

 

error: Content is protected !!
Scroll to Top