(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 12. ಅನ್ಯ ಕೋಮಿನ ಜೋಡಿಯನ್ನು ತಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಗದಗ ಮೂಲದ ರಫೀಕ್ (21)ಎಂಬಾತ ಗದಗ ಮೂಲದ ಹಿಂದೂ ಯುವತಿಯನ್ನು ಧರ್ಮಸ್ಥಳಕ್ಕೆ ಕರೆತಂದು, ಖಾಸಗಿ ಲಾಡ್ಜ್ ಬುಕ್ಕಿಂಗ್ ಮಾಡಲೆಂದು ತೆರಳಿದ್ದು, ಇದು ಅನ್ಯಮತೀಯ ಜೋಡಿ ಎಂದು ತಿಳಿದ ಲಾಡ್ಜ್ ಸಿಬ್ಬಂದಿಯು, ರೂಮ್ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಕೂಡಲೇ ಅಲ್ಲಿಂದ ಕಾಲ್ಕಿತ್ತ ಜೋಡಿ ಬೆಂಗಳೂರು ಕಡೆ ತೆರಳಲು ಬಸ್ ಹತ್ತಿದ್ದರು. ವಿಷಯ ತಿಳಿದ ಹಿಂದೂ ಕಾರ್ಯಕರ್ತರು ಕೊಕ್ಕಡದಲ್ಲಿ ಬಸ್ ತಡೆದು, ನಂತರ ಜೋಡಿಯನ್ನು ನೆಲ್ಯಾಡಿ ಪೋಲಿಸರಿಗೆ ಒಪ್ಪಿಸಿದ್ದಾರೆ.