ಕೊನೆಗೂ ಪೊಲೀಸರ ಅತಿಥಿಯಾದ ಪ್ರವೀಣ್ ಹಂತಕರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ. 11. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳಾದ ಶಿಯಾಬ್, ಬಶೀರ್ ಮತ್ತು ರಿಯಾಜ್ ರನ್ನು ಬಂಧನ ಮಾಡಲಾಗಿದ್ದು, ಮೂವರು ಸುಳ್ಯ ಮೂಲದವರು ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ಇಂದು ಮಧ್ಯಾಹ್ನ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.


ಪ್ರವೀಣ್ ನೆಟ್ಟಾರು ಕೊಲೆಯಾದ ಬಳಿಕ ಹಂತಕರು ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ನಂಟು ಹೊಂದಿದವರು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಓಡಾಡುತ್ತಿತ್ತು. ಈಗಾಗಲೇ ಕೊಲೆಗೆ ಸಹಕರಿಸಿದ ಆರೋಪಿಗಳ ಬಂಧನವಾಗಿದ್ದು ಸುಳ್ಯದ ಎಸ್.ಡಿ.ಪಿ.ಐ ಕಚೇರಿಯಲ್ಲಿ ಮಹಜರು ಪ್ರಕ್ರಿಯೆಯನ್ನೂ ನಡೆಸಲಾಗಿತ್ತು. ಈ ನಡುವೆ ಕೊಲೆ ಪ್ರತೀಕಾರಕ್ಕಾಗಿ ನಡೆಯಿತೇ ಅಥವಾ ವೃತ್ತಿ ವೈಷಮ್ಯದಿಂದ ನಡೆಯಿತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದ ಬಗ್ಗೆ ಪೊಲೀಸ್ ಮೂಲಗಳಿಂದ ತಿಳಿದುಬಂದಿತ್ತು. ಈ ಎಲ್ಲಾ ವಿಚಾರಗಳಿಗೆ ಸ್ಪಷ್ಟ ಉತ್ತರ ಇಂದಿನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿನ ಪತ್ರಿಕಾಗೋಷ್ಠಿಯ ಬಳಿಕ ತಿಳಿದು ಬರಲಿದೆ.

Also Read  ಎಸ್​ಎಸ್​ಎಲ್​ಸಿ ಪರೀಕ್ಷೆ ➤ ಕೋವಿಡ್ ಕರ್ತವ್ಯದಿಂದ ಶಿಕ್ಷಕರಿಗೆ ಬಿಡುಗಡೆ

error: Content is protected !!
Scroll to Top