ನೀರುಪಾಲಾಗಿದ್ದ ಬಾಲಕಿಯ ಮೃತದೇಹ 48 ಗಂಟೆಗಳ ಬಳಿಕ ಪತ್ತೆ



(ನ್ಯೂಸ್ ಕಡಬ) newskadaba.com ಬೈಂದೂರು, ಆ. 10. ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ ಬಿದ್ದು ನೀರು ಪಾಲಾಗಿದ್ದ ವಿದ್ಯಾರ್ಥಿನಿ ಸನ್ನಿಧಿಯ ಮೃತದೇಹ ಘಟನೆ ನಡೆದ ಸ್ಥಳದಿಂದ 300 ಮೀಟರ್ ದೂರದಲ್ಲಿ ಸಿಕ್ಕಿದೆ.







ಸ.ಹಿ.ಪ್ರಾ ಶಾಲೆ ಚಪ್ಪರಿಕೆಯ 2ನೇ ತರಗತಿಯ ವಿದ್ಯಾರ್ಥಿನಿ, ಬೊಳಂಬಳ್ಳಿಯ ಮಕ್ಕಿಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿಯ ಪುತ್ರಿ ಸನ್ನಿಧಿ (7) ಸೋಮವಾರ ಸಂಜೆ ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ಸಂದರ್ಭ ಕಾಲು ಸಂಕ ದಾಟುವಾಗ ಆಯತಪ್ಪಿ ನದಿಗೆ ಬಿದ್ದು, ನಾಪತ್ತೆಯಾಗಿದ್ದಳು. ವಿಷಯ ತಿಳಿದು ಕೂಡಲೇ ಸಾರ್ವಜನಿಕರು ಹುಡುಕಾಟ ಆರಂಭಿಸಿ, ಎಷ್ಟೇ ಹುಡುಕಾಡಿದರೂ ಸನ್ನಿಧಿ ಪತ್ತೆಯಾಗಿರಲಿಲ್ಲ. ಇದೀಗ ಘಟನೆ ನಡೆದು 48 ಗಂಟೆಗಳ ಬಳಿಕ ಘಟನಾ ಸ್ಥಳದಿಂದ 300 ಮೀಟರ್ ದೂರದಲ್ಲಿ ಸನ್ನಿಧಿ ಮೃತದೇಹ ಸಿಕ್ಕಿದೆ.






error: Content is protected !!
Scroll to Top