ಕಾಣಿಕೆ ಹುಂಡಿ ಕದಿಯುವ ಮುನ್ನ ದೇವಿಗೆ ಕೈಮುಗಿದು ಪ್ರಾರ್ಥಿಸಿದ ಕಳ್ಳ..! ➤‌ ವೀಡಿಯೊ ವೈರಲ್

(ನ್ಯೂಸ್ ಕಡಬ) newskadaba.com ಜಬಲ್‌ಪುರ, ಆ. 10. ಕಳ್ಳನೋರ್ವ ದೇವಸ್ಥಾನದ ಕಾಣಿಕೆ ಪೆಟ್ಟಿಗೆಯನ್ನು ಕದಿಯುವ ಮುನ್ನ ದೇವತೆಯ ಮುಂದೆ ಕೈಮುಗಿದು ಪ್ರಾರ್ಥಿಸಿದ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದೆ.

ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಕಳ್ಳನು ದೇವಾಲಯಕ್ಕೆ ಪ್ರವೇಶಿಸಿ ದೇವಿಗೆ ಕೈಮುಗಿದು ಬಳಿಕ ಕಾಣಿಕೆ ಪೆಟ್ಟಿಗೆಯೊಂದಿಗೆ ಪರಾರಿಯಾಗುವುದನ್ನು ಕಾಣಬಹುದು. ಕೆಲವು ಬಳಕೆದಾರರು ಘಟನೆಯ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದರೆ, ಇತರರು ಆತನ ಕುರಿತು ಅನುಕಂಪ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ ತೀವ್ರ ಅವಶ್ಯಕತೆಗೆ ಒಳಗಾಗಿರಬಹುದು, ಅದು ದೇವಾಲಯದಿಂದ ಕದಿಯಲು ಕಾರಣವಾಗಿರಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Also Read  ಕೆಟ್ಟ ದೃಷ್ಟಿ, ಜನಗಳ ದೃಷ್ಟಿ ನಿವಾರಣೆಗೆ ಏನು ಮಾಡಬೇಕು ಎಂದು ತಿಳಿದಿದೆಯೇ ನಿಮಗೆ ?

error: Content is protected !!
Scroll to Top