(ನ್ಯೂಸ್ ಕಡಬ) newskadaba.com ಸುಳ್ಯ, ಆ. 10. ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ನಡೆದ ಮಸೂದ್, ಪ್ರವೀಣ್ ನೆಟ್ಟಾರು, ಫಾಝಿಲ್ ಕೊಲೆ ಪ್ರಕರಣವು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇದರ ನಡುವೆ ಸುಳ್ಯ ತಾಲೂಕಿನ ಕನಕಮಜಲಿನಲ್ಲಿ ಸಂದೀಪ್ ಎಂಬ ಯುವಕನೋರ್ವ ತಲ್ವಾರ್ ಹಿಡಿದು ಊರಿಡೀ ಸುತ್ತಾಡಿ ಹುಚ್ಚಾಟ ಮೆರೆದ ಘಟನೆ ವರದಿಯಾಗಿದೆ.
ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲೆಂದು ಬ್ಯಾನರ್ ಅಳವಡಿಸುವ ವೇಳೆ ಪ್ಲಾಸ್ಟಿಕ್ ಬ್ಯಾನರ್ ಬಳಸದಂತೆ ಗ್ರಾಮ ಪಂಚಾಯತ್ ನಿಂದ ತಿಳಿಸಲಾಗಿತ್ತಾದರೂ, ಸಂದೀಪ್ ಮತ್ತು ಕೆಲವರು ಪ್ಲಾಸ್ಟಿಕ್ ಬ್ಯಾನರ್ ಅಳವಡಿಸಿದ್ದರು. ಇದನ್ನು ಪಂಚಾಯತ್ ನಿರ್ದೇಶನದಂತೆ ತೆರವುಗೊಳಿಸಿದ್ದು, ಇದರಿಂದ ಕುಪಿತಗೊಂಡ ಸಂದೀಪ್ ಎಂಬಾತ ತಲ್ವಾರ್ ಪ್ರದರ್ಶಿಸಿದ್ದಾನೆ ಎನ್ನಲಾಗಿದೆ.