ಅಕ್ರಮ ಜಾನುವಾರು ಸಾಗಾಟ ➤‌ ವಾಹನ, ಗೋವು ಸಹಿತ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಆ. 10. ಅಕ್ರಮ ಗೋಸಾಗಾಟವನ್ನು ತಡೆದ ಪೊಲೀಸರು ಮೂರು ಹಸುಗಳ ಸಹಿತ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ವಿದ್ಯಾಗಿರಿ ಜಂಕ್ಷನ್ ಬಳಿ ನಡೆದಿದೆ.

ಬಂಧಿತ ಆರೋಪಿಯನ್ನು ಚಾಲಕ ಸಂದೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ವಾಹನ ತಪಾಸಣಾ ನಿರತರಾಗಿದ್ದ ಮೂಡಬಿದಿರೆ ಠಾಣಾ ಎಸ್‌ಐ ಸಿದ್ದಪ್ಪ, ಎಎಸ್‌ಐ ಕುಮಾರ್‌ ಮತ್ತು ಸಿಬಂದಿಗಳು ಪಿಕಪ್ ವಾಹನವನ್ನು ತಡೆದು ತಪಾಸಣೆಗೊಳಪಡಿಸಿದಾಗ ಅಕ್ರಮವಾಗಿ ಮೂರು ಹಸುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಚಾಲಕ ಸಂದೇಶ ಶೆಟ್ಟಿಯವರನ್ನು ವಿಚಾರಿಸಿದಾಗ ಜಾನುವಾರು ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಪರವಾನಿಗೆ ಆರೋಪಿ ಬಳಿ ಇರದೇ ಇದ್ದು, ಇದೀಗ ಜಾನುವಾರುಗಳು, ವಾಹನ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Also Read  Новое казино 1Win для игры на деньги - Акции и бонусы казино

error: Content is protected !!
Scroll to Top