ನೇತ್ರಾವತಿ ನದಿಗೆ ಬಿದ್ದು ಯುವಕ ಗಂಭೀರ ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 09. ಕಾಲು ಜಾರಿ ನದಿಗೆ ಬಿದ್ದು ವಿದ್ಯಾರ್ಥಿಯೊಬ್ಬ ನೀರು ಪಾಲಾಗಿದ್ದು, ಬಳಿಕ ಸಾರ್ವಜನಿಕರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ಬರಿಮಾರು ಗ್ರಾಮದ ಕಾಗೆಕಾನ ಎಂಬಲ್ಲಿ ನಡೆದಿದೆ.

 

ನೀರಿಗೆ ಬಿದ್ದ ಯುವಕನನ್ನು ಬರಿಮಾರ್ ಗ್ರಾಮದ ಪಾಪೆತ್ತಿಮಾರು ನಿವಾಸಿ ರಕ್ಷಣ್(16) ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ರಜೆ ಇದ್ದ ಹಿನ್ನೆಲೆ ನೇತ್ರಾವತಿ ನದಿ ಬಳಿಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಳಿಕ ಸ್ಥಳೀಯರು ಮತ್ತು ಅಗ್ನಿಶಾಮಕದಳವರು ವಿದ್ಯಾರ್ಥಿಯನ್ನು ಕಾರ್ಯಾಚರಣೆ ನಡೆಸಿ, ಆಂಬ್ಯುಲೆನ್ಸ್ ಮೂಲಕ ಸಮೀಪದ ಕಲ್ಲಡ್ಕ ಆಸ್ಪತ್ರೆಗೆ ದಾಖಲಿಸಿ, ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಕುಂಡಾಜೆ ಶಾಲಾ ಮಂತ್ರಿಮಂಡಲ ರಚನೆ

error: Content is protected !!
Scroll to Top