ಮಂಗಳೂರು: ವ್ಯಕ್ತಿಗೆ ಕರೆಮಾಡಿ ಜೀವಬೆದರಿಕೆ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 09. ವ್ಯಕ್ತಿಯೋರ್ವನನ್ನು ಬೈಕ್‌ ನಲ್ಲಿ ಹಿಂಬಾಲಿಸಿದ ಹಾಗೂ ಬೆದರಿಕೆ ಕರೆ ಬಂದಿರುವ ಕುರಿತು ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ.


ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್, ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಬೈಕ್‌ ನಲ್ಲಿ ಫಾಲೋ ಮಾಡಿಕೊಂಡು ಬಂದಿದ್ದು, ಈ ಕುರಿತು ಪರಿಶೀಲನೆ ನಡೆಸಿದಾಗ ಹಿಂಬಾಲಿಸಿಕೊಂಡು ಬಂದವರು ಫುಡ್ ಡೆಲಿವರಿಯವರು ಎಂದು ಗೊತ್ತಾಗಿದೆ ಎಂದರು. ಆದರೆ ಆ ವ್ಯಕ್ತಿಗೆ ರಾತ್ರಿ ವೇಳೆ ಯಾರೋ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದರ ಬಗ್ಗೆ ಈಗಾಗಲೇ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Also Read  ಹಿಂದೂ ಧರ್ಮದ ಬಗ್ಗೆ ಅವಹೇಳನ                 ಸಚಿವ ಸತೀಶ್ ಜಾರಕಿಹೊಳಿಗೆ ಕೋರ್ಟ್ ಸಮನ್ಸ್

error: Content is protected !!
Scroll to Top