ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ➤ ಆರೋಪಿಗಳಿಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 09. ಬಿಜೆಪಿ ಯುವಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.7ರಂದು ಬಂಧಿಸಲಾಗಿದ್ದ ಇಬ್ಬರು ಆರೋಪಿಗಳನ್ನು ಪ್ರಕರಣದ ತನಿಖಾಧಿಕಾರಿ ಪುತ್ತೂರು ಡಿವೈಎಸ್‌ಪಿ ಡಾ.ಪಿ.ಗಾನಾ ಕುಮಾರ್ ನೇತೃತ್ವದಲ್ಲಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 

ಹತ್ಯೆ ಘಟನೆಗೆ ಸಂಬಂಧಿಸಿ ಆರೋಪಿಗಳಾದ ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಾಲ್ ಮತ್ತು ಸುಳ್ಯ ನಾವೂರು ನಿವಾಸಿ ಆಬಿದ್ ಎಂಬವರನ್ನು ಆ.7ರಂದು ಪೊಲೀಸರು ಬಂಧಿಸಿದ್ದರು.
ಬಂಧಿತರನ್ನು ಆ.8ರಂದು ಬೆಳಿಗ್ಗೆ ಸುಳ್ಯ ಮತ್ತು ಬೆಳ್ಳಾರೆಯ ಎಸ್‌ಡಿಪಿಐ ಕಚೇರಿಗೆ ಹಾಗೂ ಸುಳ್ಯ, ಬೆಳ್ಳಾರೆಯ ಇತರ ಕೆಲವು ಕಡೆಗಳಿಗೆ ಕರೆದೊಯ್ದು ಮಹಜರು ನಡೆಸಿ ಸಂಜೆ ವೇಳೆಗೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕಿರಿಯ ಸಿವಿಲ್ ನ್ಯಾಯಾಧೀಶೆ ಕು.ಅರ್ಪಿತಾರವರು ಆರೋಪಿಗಳಿಗೆ ಆ.12ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ.

Also Read  ಬೈತಡ್ಕ: ತೂಫಾನ್ ಹಾಗೂ ಅಟೋ ರಿಕ್ಷಾ ನಡುವೆ ಢಿಕ್ಕಿ

error: Content is protected !!
Scroll to Top