ವಿಟ್ಲ: ನಿರ್ಜನ ಪ್ರದೇಶದಲ್ಲಿ ತಲೆಬುರುಡು, ಎಲುಬು ಪತ್ತೆ

(ನ್ಯೂಸ್ ಕಡಬ) newskadaba.com ವಿಟ್ಲ, ಆ. 09. ಇಲ್ಲಿನ ವಿಟ್ಲದ ನೆಕ್ಕರೆ ಕಾಡಿನ ಸಮೀಪದ ಗುಡ್ಡದಲ್ಲಿ ತಲೆಬುರುಡೆ ಮತ್ತು ಎಲುಬು ಹಾಗೂ ಬಟ್ಟೆ ಪತ್ತೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಗುಡ್ಡಕ್ಕೆ ಸಂಜೆ ವೇಳೆ ಕಟ್ಟಿಗೆ ತರಲೆಂದು ಹೋದವರಿಗೆ ತಲೆ ಬುರುಡೆ ಹಾಗೂ ಎಲುಬು ಬಟ್ಟೆಗಳು ಕಾಣಸಿಕ್ಕಿದ್ದು, ಅವರು ಮನೆಗೆ ಬಂದು ತಿಳಿಸಿದ್ದು, ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಈ ಕುರಿತು ಪರಿಶೀಲನೆ ನಡೆಸುತ್ತಿದ್ದು, ಈ ಹಿಂದೆ ಕಾಣೆಯಾದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Also Read  ಯೂಟ್ಯೂಬ್ ನಲ್ಲಿ ಬಂಟ್ವಾಳದ ಯುವತಿಯ ಫೋಟೋ ದುರ್ಬಳಕೆ...! ➤ ದಂಪತಿ ಅರೆಸ್ಟ್

error: Content is protected !!
Scroll to Top