ದ.ಕ ಜಿಲ್ಲೆಯಲ್ಲಿ ಹೇರಲಾಗಿದ್ದ ರಾತ್ರಿ ನಿರ್ಬಂಧ ತೆರವು ➤ ಆ. 14ರ ವರೆಗೆ ನಿಷೇಧಾಜ್ಞೆ ಮುಂದುವರಿಕೆ- ಡಿಸಿ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 08. ದ.ಕ ಜಿಲ್ಲೆಯಲ್ಲಿ ನಡೆದ ಅಹಿತಕರ ಕೃತ್ಯದ ಹಿನ್ನೆಲೆ ಕೆಲವೊಂದು ನಿರ್ಬಂಧ ಹೇರಲಾಗಿತ್ತು. ಈ ನಿರ್ಬಂಧಗಳನ್ನು ಆ.8 ರಿಂದ ತೆರವುಗೊಳಿಸಿ ದ.ಕ‌. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

 

ಕಳೆದ ಹಲವು ದಿನಗಳಿಂದ ರಾತ್ರಿ 9 ಗಂಟೆಗೆ ಅಂಗಡಿ‌ ಮುಂಗಟ್ಟುಗಳನ್ನು ಮುಚ್ಚಲು ಆದೇಶಿಲಾಗಿತ್ತು. ಸದ್ಯ ಇಂದಿನಿಂದ (ಆ.8) ರಾತ್ರಿ 9 ಗಂಟೆಯ ನಂತರವೂ ಅಂಗಡಿ ಮುಂಗಟ್ಟುಗಳನ್ನು ತೆರೆದಿಡಬಹುದು. ಬಾರ್, ವೈನ್ ಶಾಪ್ ಎಂದಿನಂತೆ ಕಾರ್ಯಾಚರಿಸಲು ಅವಕಾಶ ನೀಡಲಾಗಿದೆ. ಜನರ ಓಡಾಟಕ್ಕೂ ಕೂಡ ಯಾವುದೇ ನಿರ್ಬಂಧವಿರುವುದಿಲ್ಲ. ಆಗಸ್ಟ್ 14 ರ ತನಕ 144 ಸೆಕ್ಷನ್ ಜಾರಿಯಲ್ಲಿರುತ್ತೆ ಎಂದು ದ.ಕ‌ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

Also Read  Breaking News ವಿಟ್ಲ: ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಮೃತ್ಯು ➤ ಕಟ್ಟಡ ಕಾಮಗಾರಿ ವೇಳೆ ದುರ್ಘಟನೆ

error: Content is protected !!
Scroll to Top