ಭಟ್ಕಳ: ಮತ್ತೆ ಭೂಕುಸಿತ ➤ ರಸ್ತೆ ಸಂಪರ್ಕ ಕಡಿತ..?

(ನ್ಯೂಸ್ ಕಡಬ) newskadaba.com ಭಟ್ಕಳ, ಆ. 06. ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಇಲ್ಲಿನ ಮುಟ್ಟಳ್ಳಿ ಎಂಬಲ್ಲಿ ಗುಡ್ಡ ಕುಸಿತವುಂಟಾದ ಪರಿಣಾಮ ನಾಲ್ವರು ಮೃತಪಟ್ಟ ಸುದ್ದಿ ಮಾಸುವ ಮುನ್ನವೇ ಮತ್ತೆ ಅದೇ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿ ಜನರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಕಳೆದ ಆ. 02 ರಂದು ಬೆಳಗಿನ ಜಾವ ಗುಡ್ಡ ಕುಸಿದು ದೊಡ್ಡ ದೊಡ್ಡ ಭಾಗವೇ ಸಡಿಲಗೊಂಡಿತ್ತು. ಕಳೆದ 2-3 ದಿನಗಳಿಂದ ಸ್ವಲ್ಪ ಸ್ವಲ್ಪವೇ ಜಾರುತ್ತಿದ್ದ ಗುಡ್ಡದ ಭಾಗ ಮತ್ತೆ ಜಾರಿ ಕೆಳಕ್ಕೆ ಬಂದಿದ್ದು ಅಕ್ಕಪಕ್ಕದ ಮನೆಯವರು ಕೂಡಾ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಆರು ಮನೆಯವರಿಗೆ ಮನೆ ಖಾಲಿ ಮಾಡುವಂತೆ ನೋಟೀಸು ನೀಡಲಾಗಿತ್ತಾದರೂ ಇದುವರೆಗೂ ಯಾವುದೇ ಮನೆ ಖಾಲಿ ಮಾಡಿಲ್ಲ. ಗುಡ್ಡ ಕುಸಿತದ ಮೇಲ್ಬಾಗದಲ್ಲಿ ಸಂಪರ್ಕ ರಸ್ತೆ ಇದ್ದು ಇನ್ನೂ ಸ್ವಲ್ಪ ಗುಡ್ಡದ ಭಾಗ ಕುಸಿದರೆ ಹತ್ತಿರದಲ್ಲಿಯೇ ಇರುವ ರಸ್ತೆ ಸಂಪರ್ಕವೂ ಕೂಡಾ ಕಡಿತಗೊಳ್ಳುವ ಆತಂಕ ನಿರ್ಮಾಣಗೊಂಡಿದೆ.

Also Read  ವೈದ್ಯಕೀಯ ಚಿಕಿತ್ಸೆ ಕೋರಿ ನಿರ್ಭಯಾ ಅಪರಾಧಿ ಸಲ್ಲಿಸಿದ ಅರ್ಜಿ ವಜಾ

error: Content is protected !!
Scroll to Top