ದೇಯಿಬೈದೇತಿಗೆ ಅವಮಾನ ಪ್ರಕರಣ ► ಆರೋಪಿಗೆ ಜಾಮೀನು ಮಂಜೂರು

(ನ್ಯೂಸ್ ಕಡಬ) newskadaba.com ಪುತ್ತೂರು, ನ.14. ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿಬೈದೆತಿಯ ಪುತ್ತಳಿಯ ಸಮೀಪ ಕುಳಿತು ಅಶ್ಲೀಲವಾಗಿ ಫೊಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣದ ಆರೋಪಿಗೆ ಪುತ್ತೂರು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಮ್.ಎಫ್.ಸಿ ನ್ಯಾಯಾಲಯ ಮಂಗಳವಾರದಂದು ಜಾಮೀನು ಮಂಜೂರು ಮಾಡಿದೆ.

ಪ್ರಕರಣದ‌ ಆರೋಪಿ ಈಶ್ವರ ಮಂಗಲ ನಿವಾಸಿ ಮಹಮ್ಮದ್ ಎಂಬವರ ಪುತ್ರ ಹನೀಫ್ ವಿರುದ್ಧ ಸಂಪ್ಯ ಠಾಣೆಯಲ್ಲಿ ಜಾಮೀನು ರಹಿತ ದೂರು ದಾಖಲಾಗಿತ್ತು. ಅರೋಪಿ ಪರವಾಗಿ ವಕೀಲರಾದ ಅಶ್ರಫ್ ಕೆ. ಅಗ್ನಾಡಿ, ಅಬ್ದುಲ್ ಮಜೀದ್ ಖಾನ್, ಅಬ್ದುಲ್ ರಹಿಮಾನ್ ಮತ್ತು ಮುಸ್ತಫಾ ಕಡಬ ವಾದಿಸಿದ್ದರು.

Also Read  ಹಾರ್ಡ್ ವೇರ್ ಮಳಿಗೆಯಲ್ಲಿ ಕಳ್ಳರ ಕೈಚಳಕ - ನಗದು ಸಹಿತ 15 ಲಕ್ಷ ರೂಗಳ ಸೊತ್ತು ಕಳವು

error: Content is protected !!
Scroll to Top