ಮಿಕ್ಸಿಯಲ್ಲಿ ತಾಂತ್ರಿಕ ದೋಷ ಹಿನ್ನೆಲೆ ➤ 20,189 ರೂ. ಪರಿಹಾರಕ್ಕೆ ಗ್ರಾಹಕರ ವೇದಿಕೆ ಆದೇಶ

(ನ್ಯೂಸ್ ಕಡಬ) newskadaba.com ಉಡುಪಿ, ಆ. 06. ಗ್ರಾಹಕಿಯೋರ್ವರಿಗೆ ತಾಂತ್ರಿಕ ದೋಷವಿದ್ದ ಮಿಕ್ಸರ್ ಗ್ರೈಂಡರ್ ಮಾರಾಟ ಮಾಡಿದ್ದ ಉಡುಪಿಯ ಪೈ ಇಂಟರ್‌ನ್ಯಾಷನಲ್ ಹಾಗೂ ಪ್ರೀತಿ ಕಿಚನ್ ಅಪ್ಲಯನ್ಸಸ್ ಪ್ರೈ.ಲಿ. ಪರಿಹಾರ ಒದಗಿಸಬೇಕು ಎಂದು ಉಡುಪಿ ಜಿಲ್ಲಾ ಗ್ರಾಹಕರ ಆಯೋಗ ತೀರ್ಪು ನೀಡಿದೆ.

ಉಪನ್ಯಾಸಕಿ ಅನಿತಾ ಎಂಬವರು ಎರಡು ವರ್ಷಗಳ ಹಿಂದೆ ಪೈ ಇಂಟರ್‌ನ್ಯಾಷನಲ್‌ ಅಂಗಡಿಯಿಂದ 4,239 ರೂ.ಗಳನ್ನು ನೀಡಿ ಪ್ರೀತಿ ಮಿಕ್ಸರ್ ಗ್ರೈಂಡರ್ ಖರೀದಿಸಿದ್ದರು. ಆದರೆ ಮೂರೇ ತಿಂಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಮಿಕ್ಸಿಗೆ ಎರಡು ವರ್ಷಗಳ ಗ್ಯಾರಂಟಿ ಮತ್ತು 5 ವರ್ಷಗಳ ವಾರೆಂಟಿ ಇರುವುದರಿಂದ ಹೊಸ ಮಿಕ್ಸಿ ಕೊಡುವಂತೆ ಗ್ರಾಹಕಿ ಮನವಿ ಮಾಡಿದ್ದರು. ಆದರೆ ಪೈ ಇಂಟರ್‌ನ್ಯಾಷನಲ್‌ ನವರು ಬದಲಿ ಮಿಕ್ಸಿಯನ್ನು ಕೊಡಲು ಒಪ್ಪದೇ ಅದೇ ಮಿಕ್ಸಿಯನ್ನು ಸರಿಪಡಿಸಿ ಕೊಟ್ಟಿದ್ದರು. ನಂತರ ಮೂರು ತಿಂಗಳಿಗೊಮ್ಮೆ ಮಿಕ್ಸಿಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳಲಾರಂಭಿಸಿದ್ದು, ಬದಲಿ ಮಿಕ್ಸಿ ಕೊಡಲು ಒಪ್ಪದಿದ್ದಾಗ ಗ್ರಾಹಕಿ ಅನಿತಾ ಅವರು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪೈ ಇಂಟರ್‌ನ್ಯಾಷನಲ್ ಹಾಗೂ ಪ್ರೀತಿ ಕಿಚನ್ ಅಪ್ಲಯನ್ಸಸ್ ಪ್ರೈ.ಲಿ. ವಿರುದ್ಧ ದೂರು ನೀಡಿದ್ದರು. ಈ ದೂರನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕರ ಆಯೋಗ ಮಿಕ್ಸಿಯ ದರ, ಬಡ್ಡಿಯ ಮೊತ್ತ, ಅವರ ಕೆಲಸದಲ್ಲಾದ ತೊಂದರೆ, ಮಾನಸಿಕ ಮತ್ತು ದೈಹಿಕ ಶ್ರಮ, ಓಡಾಟದ ಖರ್ಚು, ಕೋರ್ಟ್ ವ್ಯವಹಾರದ ಖರ್ಚು ಹೀಗೆ ಒಟ್ಟು 20,189 ರೂ.ಗಳನ್ನು ಗ್ರಾಹಕಿಗೆ ನೀಡಬೇಕೆಂದು ಜಿಲ್ಲಾ ಗ್ರಾಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಸುನೀಲ ಮಾಸರೆಡ್ಡಿ ಆದೇಶ ಹೊರಡಿಸಿದ್ದಾರೆ.

Also Read  ಸುಳ್ಯದಲ್ಲಿ ಗೃಹರಕ್ಷಕರಿಗೆ ಪದೋನ್ನತಿ ಮತ್ತು ಸನ್ಮಾನ ಕಾರ್ಯಕ್ರಮ

error: Content is protected !!
Scroll to Top