ಶಾಲಾ ವಾಹನಕ್ಕೆ ಕಾಯುತ್ತಿದ್ದ ಮಹಿಳೆಗೆ ಹಲ್ಲೆ ➤ ಚಿನ್ನಾಭರಣ ದರೋಡೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಆ. 06. ಶಾಲಾ ವಾಹನದಲ್ಲಿ ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದ ಮಹಿಳೆಗೆ ಯಾರೋ ಅಪರಿಚಿತರು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾದ ಘಟನೆ ತಾಲೂಕಿನ ಕೊರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡಿನಬೆಟ್ಟು ಸಮೀಪದ ದಬ್ಬೆಕಟ್ಟೆ ಪ್ರಮುಖ ರಸ್ತೆಯಲ್ಲಿ ಶುಕ್ರವಾರದಂದು ನಡೆದಿದೆ.


ರಸ್ತೆ ಬದಿಯಲ್ಲಿ ನಿಂತು ಶಾಲಾ ವಾಹನದಲ್ಲಿ ಬರುವ ಮಕ್ಕಳಿಗಾಗಿ ಕಾಯುತ್ತಿದ್ದ ವೇಳೆ ಅಪರಿಚಿತರು ಬೈಕ್‌ನಲ್ಲಿ ಬಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಈ ಕೃತ್ಯವೆಸೆಗಿದ್ದು, ಪರಿಣಾಮ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಕಂಡ್ಲೂರು ಪೊಲೀಸ್‌ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಕಲ್ಲಡ್ಕ ಡಾ| ಪ್ರಭಾಕರ್ ಹೆಸರಲ್ಲಿ ನಕಲಿ ಖಾತೆ - ದೂರು ದಾಖಲು

error: Content is protected !!
Scroll to Top