ಪುತ್ತೂರು: ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 05. ಫ್ಲ್ಯಾಟ್ ನ ಐದನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಒಂಬತ್ತನೇ ತರಗತಿಯ ಬಾಲಕ ಮನೋಹರ್ ರೈ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ವರದಿಯಾಗಿದೆ.

ಸುಶಾನ್ ರೈ ಅವರು ಶಾಲೆಯಿಂದ ನೇರ ಮನೆಗೆ ಹೋಗದೆ ವಸತಿ ಸಮುಚ್ಚಾಯಕ್ಕೆ ಸಂಜೆ ಗಂಟೆ 4.20 ಕ್ಕೆ ಒಳಗೆ ಬಂದಿರುವುದು ಸಿ.ಸಿ. ಕ್ಯಾಮರದಲ್ಲಿ ಸೆರೆಯಾಗಿದೆ. ಕೆಲವೇ ನಿಮಿಷದಲ್ಲಿ ಆತ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಆತ ಯಾವ ಮಹಡಿಯಿಂದ ಬಿದ್ದಿರುವುದೆಂದು ತಿಳಿದಿಲ್ಲ. ಆದರೆ ಆತನ ಶಾಲಾ ಬ್ಯಾಗ್ ಮಾತ್ರ 5ನೇ ಮಹಡಿಯಲ್ಲಿ ಪತ್ತೆಯಾಗಿದೆ.

error: Content is protected !!

Join the Group

Join WhatsApp Group