ಪುತ್ತೂರು: ಐದನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 05. ಫ್ಲ್ಯಾಟ್ ನ ಐದನೇ ಮಹಡಿಯಿಂದ ಬಿದ್ದು 9ನೇ ತರಗತಿಯ ಬಾಲಕನೋರ್ವ ಗಂಭೀರ ಗಾಯಗೊಂಡ ಘಟನೆ ಬೊಳುವಾರಿನಲ್ಲಿ ನಡೆದಿದೆ.

ಗಂಭೀರ ಗಾಯಗೊಂಡ ಬಾಲಕನನ್ನು ಸುದಾನ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಮನೋಹರ್ ರೈ ಎಂಬವರ ಪುತ್ರ ಸುಹಾನ್ ಎಂದು ಗುರುತಿಸಲಾಗಿದೆ. ಈತ ಮನೆಯವರೊಂದಿಗೆ ವಾಸವಾಗಿದ್ದ ಫ್ಲ್ಯಾಟ್ ನ ಐದನೇ ಮಹಡಿಯಿಂದ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಆತನನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

Also Read  ಬಿಜೆಪಿಯ ಸೇಡಿನ ರಾಜಕೀಯದಿಂದ ಡಿಕೆಶಿ ಮೇಲೆ ಐಟಿ ದಾಳಿ ► ನಾಳೆ ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

error: Content is protected !!
Scroll to Top