ಮಾದಕ ವಸ್ತು ಸಾಗಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 05. ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತುಗಳ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

ಬಂಧಿತರನ್ನು ಕಣ್ಣೂರು ಮಾಡಾಯಿಯ ನಿಜಾಮ್ ಮತ್ತು ಮುಹಮ್ಮದ್ ತಾಹಾ ಎಂದು ಗುರುತಿಸಲಾಗಿದೆ. ನೀಲೇಶ್ವರ ಪಳ್ಳಿಕೆರೆ ಎಂಬಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ ನೇತೃತ್ವದ ತಂಡವು ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾರಿನಲ್ಲಿದ್ದವರ ಚಲನವಲನದ ಬಗ್ಗೆ ಗಮನಿಸಿದ ಪೊಲೀಸರು ತಪಾಸಣೆ ನಡೆಸಿದಾಗ ಎರಡು ಕಿಲೋ ಗಾಂಜಾ ಹಾಗೂ 25 ಗ್ರಾಂ ಎಂಡಿಎಂಎ ಮಾದಕ ವಸ್ತು ಸಹಿತ, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Also Read  ಧರ್ಮಸ್ಥಳ :ಕಾರುಣ್ಯ ಟ್ರೆಡರ್ಸ್‍ನಿಂದ ಅಡಿಕೆ ಕದ್ದ ಆರೋಪಿ ಖಾಕಿ ಬಲೆಗೆ

error: Content is protected !!
Scroll to Top