ಮಂಗಳೂರು: ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಉಚಿತ ಪ್ರಯಾಣದ ಬಸ್ ಪಾಸ್ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 05. ಬಸ್ಸು ಮಾಲಕರ ಸಂಘ ಮಂಗಳೂರು ಹಾಗೂ ಸಾನ್ನಿಧ್ಯ ಸಮೂಹ ಸಂಸ್ಥೆಗಳು ಶಕ್ತಿನಗರ ಮಂಗಳೂರು ಇವರ ಸಹಯೋಗದೊಂದಿಗೆ ಮಂಗಳೂರಿನ 4 ವಿಶೇಷ ಶಾಲೆಗಳ ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಉಚಿತ ಬಸ್ಸು ಪಾಸುಗಳ ವಿತರಣಾ ಕಾರ್ಯಕ್ರಮವು ಸಾನ್ನಿಧ್ಯ ಶಾಲೆಯಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ನೆರೆದ ಅತಿಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಜಯಶೀಲ ಅಡ್ಯಂತಾಯ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ ಅಧ್ಯಕ್ಷರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ನೆರೆದ ಅತಿಥಿಗಳು ಉಚಿತ ಪ್ರಯಾಣದ ಬಸ್ಸು ಪಾಸುಗಳ ಸಾಂಕೇತಿಕ ವಿಚಾರಣೆ ನಡೆಸಿದರು. ಬಸ್ಸು ಪಾಸು ವಿತರಣೆ ಬಳಿಕ ಜಿಲ್ಲಾಧಿಕಾರಿ ಡಾ .ರಾಜೇಂದ್ರ ಕೆ ವಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಳಿಕ ಸಂಸ್ಥೆಯ ವತಿಯಿಂದ ರಾಜೇಂದ್ರ ಕೆ ವಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್, ಜಯಶೀಲ ಅಡ್ಯಂತಾಯ, ಮಹಾಬಲ ಮಾರ್ಲ, ಜಗದೀಶ್ ಶೆಟ್ಟಿ, ರಾಜ್ ಕುಮಾರ್, ವಸಂತ ಕುಮಾರ್ ಶೆಟ್ಟಿ, ಗಣೇಶ್ ಶೆಟ್ಟಿ, ಸತ್ಯರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Also Read  ಸುಳ್ಯ: ಪಾದಚಾರಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿ ➤ ವ್ಯಕ್ತಿ ಗಂಭೀರ

error: Content is protected !!
Scroll to Top