ತಲವಾರು ದಾಳಿ ನಡೆದಿದೆ ಅಂತ ಕಥೆ ಕಟ್ಟಿದ್ದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು..?

(ನ್ಯೂಸ್ ಕಡಬ) nrwskadaba.com ಮಂಗಳೂರು, ಆ. 04. ಸೆಂಟ್ರಿಂಗ್ ಕೆಲಸಕ್ಕೆ ತೆರಳುತ್ತಿದ್ದ ವೇಳೆ ತನ್ನ ಮೇಲೆ ಮೂವರು ತಲವಾರು ದಾಳಿ ನಡೆಸಲೆತ್ನಿಸಿದ್ದಾರೆ ಎಂದು ಸುಳ್ಳು ಸುದ್ದಿ ಹರಿಸಿದ್ದ ಕೆಸಿರೋಡ್ ನಿವಾಸಿ ಕಿಶೋರ್ ಎಂಬಾತನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸುಳ್ಳು ಸುದ್ದಿ ಹರಡಿದ ಕುರಿತು ಮಂಗಳೂರು ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದು, ಉಳ್ಳಾಲದ ಬಿಜೆಪಿ ಕಾರ್ಯಕರ್ತ ಕಿಶೋರ್ ಸಾಲ್ಯಾನ್ ಎಂಬಾತ ಕೆಲಸಕ್ಕೆ ತೆರಳುತ್ತಿದ್ದ ವೇಳೆ ತಲವಾರು ದಾಳಿಗೆ ಯತ್ನ ನಡೆಸಿದ್ದರು ಎಂಬುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಜಿ ಬಗ್ಗೆ ನಾನೇ ಆ ವ್ಯಕ್ತಿಯ ಬಳಿ ಮಾತನಾಡಿದಾಗ ತನ್ನ ಮೇಲೆ ಯಾರೂ ದಾಳಿ ನಡೆಸಿಲ್ಲ ಮತ್ತು ಯಾರೂ ಫಾಲೋ ಮಾಡಿಕೊಂಡು ಬಂದಿಲ್ಲ. ನನ್ನ ಮೇಲೂ ದಾಳಿಯಾಗಬಹುದು ಎಂದು ಕಲ್ಪಿಸಿ ದಾಳಿ ಯತ್ನದ ಬಗ್ಗೆ ಹೇಳಿದ್ದೆ ಎಂದು ಆತ ಹೇಳಿದ್ದಾನೆ. ಸದ್ಯ ಆತನ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Also Read  ಬಂಟ್ವಾಳ: ಶಾಸಕ ಯು. ರಾಜೇಶ್ ನಾಯಕ್ ಅವರಿಂದ ಅಟೋ ರಿಕ್ಷಾ ಹಸ್ತಾಂತರ

error: Content is protected !!
Scroll to Top