(ನ್ಯೂಸ್ ಕಡಬ) newskadaba.com ಮಂಗಳೂರು, ಆ. 04. ಮಂಗಳೂರಿನಲ್ಲಿ 16 ವರ್ಷಗಳಿಂದ ವಕೀಲರಾಗಿ ಗುರುತಿಸಿಕೊಂಡಿದ್ದ ಸಿರಾಜುದ್ದೀನ್ ಎ. ಅವರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ನಿವಾಸಿ ಸಿರಾಜುದ್ದೀನ್, ಮಂಗಳೂರಿನಲ್ಲಿ ಖ್ಯಾತ ವಕೀಲ ಅರುಣ್ ಬಂಗೇರ ಅವರ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಹಲವು ವರ್ಷಗಳಿಂದ ನ್ಯಾಯಾಧೀಶರ ಹುದ್ದೆಗಾಗಿ ಪರೀಕ್ಷೆ ಬರೆಯುತ್ತಿದ್ದ ಇವರು, ಏಳನೇ ಬಾರಿಯ ಪ್ರಯತ್ನದಲ್ಲಿ ಸಫಲತೆ ಕಂಡಿದ್ದು, ನ್ಯಾಯವಾದಿಯಾಗಿದ್ದ ಸಿರಾಜುದ್ದೀನ್ ಎ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಕರ್ನಾಟಕದ ಗಂಗಪ್ಪ ಈರಪ್ಪ ಪಾಟೀಲ್, ಸುಮಂಗಳ ಚಕಲಬ್ಬಿ, ಮಧು ಎನ್.ಆರ್., ಆನಂದ, ಸಿರಾಜುದ್ದೀನ್ ಎ, ಸರಿತಾ ಡಿ, ಮಾಯಣ್ಣ ಬಿ.ಎಲ್. ಅವರು ಜಿಲ್ಲಾ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದಾರೆ.
Also Read ಉದನೆ ಪುತ್ಯ ಭಾಗದಲ್ಲಿ ಪ್ರತ್ಯಕ್ಷಗೊಂಡ ಕಾಡಾನೆ ➤ 'ಆಪರೇಷನ್ ಎಲಿಫೆಂಟ್' ರೆಂಜಿಲಾಡಿಯಿಂದ ಉದನೆಗೆ ಶಿಫ್ಟ್