ಸುಬ್ರಹ್ಮಣ್ಯ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 04. ವಿವಾಹಿತ ಮಹಿಳೆಯನ್ನು ಅತ್ಯಾಚಾರವೆಸಗಿ ಬಳಿಕ ಮದುವೆಯಾಗುವುದಾಗಿ ನಂಬಿಸಿ 1.70 ಲಕ್ಷ ರೂ. ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಸಂತ್ರಸ್ತ ಮಹಿಳೆಯು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮೇ. 20ರಂದು ರಾತ್ರಿ ಹತ್ತು ಗಂಟೆಯ ವೇಳೆಗೆ ಪಾನಮತ್ತನಾಗಿ ಬಂದ ಪವನ್ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದನು. ಈ ಕುರಿತು ಪೊಲೀಸ್ ದೂರು ನೀಡುತ್ತೇನೆ ಎಂದಾಗ ನಾನು ನಿನ್ನನ್ನು ಮದುವೆಯಾಗುತ್ತೇನೆ. ದೂರು ಕೊಡುವುದು ಬೇಡ ಎಂದು ಹೇಳಿ ವಕೀಲರ ಮುಖಾಂತರ ಲಿಖಿತ ಒಪ್ಪಿಗೆ ನೀಡಿದ್ದು, ಇದಾದ ಬಳಿಕ ಹಣ ಪಡೆದು ಮದುವೆಯಾಗುವುದಿಲ್ಲ ಎಂದು ವಂಚಿಸಿರುವುದಾಗಿ ಸಂತ್ರಸ್ತ ಮಹಿಳೆಯು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.

Also Read  ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಡ್ರಗ್ಸ್ ನಶೆಯಲ್ಲಿ ತೂರಾಟ ಆರೋಪಿಗಳು ವಶಕ್ಕೆ

error: Content is protected !!
Scroll to Top