ಫಾಝಿಲ್ ಕೊಲೆ ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 04. ಸುರತ್ಕಲ್ ನಲ್ಲಿ ಇತ್ತೀಚೆಗೆ ನಡೆದ ಕಾಟಿಪಳ್ಳ ಮಂಗಳಪೇಟೆ ನಿವಾಸಿ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಬಂಧಿತರಾದ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯವು 14 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.


ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನಲೆ ಆರೋಪಿಗಳಾದ ಸುಹಾಸ್‌ ಶೆಟ್ಟಿ, ಮೋಹನ್‌, ಅಭಿಷೇಕ್‌, ಶ್ರೀನಿವಾಸ್‌, ದೀಕ್ಷಿತ್‌ ಮತ್ತು ಗಿರಿಧರ್‌ನನ್ನು ನ್ಯಾಯಾಲಯವು ಪೊಲೀಸ್‌ ಕಸ್ಟಡಿಗೆ ನೀಡಿದೆ. ಕಾರು ಮಾಲಕ ಅಜಿತ್‌ ಕ್ರಾಸ್ತಾ ಅಲ್ಲದೆ , ಹತ್ಯೆ ಬಳಿಕ ಕಾರನ್ನು ಇನ್ನಾದಲ್ಲಿ ಬಿಟ್ಟು ಆರೋಪಿಗಳು ತಪ್ಪಿಸಿಕೊಳ್ಳಲು ಮತ್ತೊಂದು ಕಾರು ನೀಡಿ ನೆರವಾದವರು ಯಾರು ಎನ್ನುವ ಬಗ್ಗೆ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

Also Read  ವಿಧಾನಸಭಾ ಅಧಿವೇಶನ ಜು. 21ರವರೆಗೆ ವಿಸ್ತರಣೆ ➤ ಸ್ಪೀಕರ್ ಯುಟಿ ಖಾದರ್

error: Content is protected !!
Scroll to Top