ಮಂಗಳೂರು: ಲಘು ಭೂಕಂಪನದ ಅನುಭವ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 03. ನಗರದ ಮೇರಿಹಿಲ್ ಸುತ್ತಮುತ್ತದ ನಿವಾಸಿಗಳಿಗೆ ಬುಧವಾರ ಬೆಳಗ್ಗೆ 10ರಿಂದ 10.30ರ ವೇಳೆಗೆ ಭೂ ಕಂಪಿಸಿದ ಅನುಭವವಾಗಿದೆ.

ಭೂಕಂಪನದ ಅನುಭವದಿಂದ ಸುರಕ್ಷತಾ ದೃಷ್ಟಿಯಿಂದ ಸುತ್ತಮುತ್ತದ ಶಾಲೆಯ ವಿದ್ಯಾರ್ಥಿಗಳನ್ನು ಕೆಲಕಾಲ ಶಿಕ್ಷಕರು ತರಗತಿಯಿಂದ ಹೊರನಿಲ್ಲಿಸಿದ್ದಾರೆ. ಬಳಿಕ ಮತ್ತೆ ಎಂದಿನಂತೆ ತರಗತಿಗಳು ಆರಂಭವಾಗಿದೆ. ವಿದ್ಯಾರ್ಥಿಗಳ ಹೆತ್ತವರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಸುತ್ತಮುತ್ತಲಿನ ಒಂದಷ್ಟು ಬಹುಮಹಡಿಯ ಕಟ್ಟಡಗಳಲ್ಲೂ ಲಘು ಭೂಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನು ಮೇರಿಹಿಲ್ ನಲ್ಲಿ ಭೂಮಿ ಕಂಪಿಸಿದೆಯೇ ಅಥವಾ ಇನ್ಯಾವುದೋ ಕಾರಣದಿಂದ ಜನಕ್ಕೆ ಈ ರೀತಿಯ ಅನುಭವವಾಗಿದೆಯೋ ಎನ್ನುವುದು ಇನ್ನಷ್ಟೇ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.

Also Read  ಆ. 07ರಂದು ಬಿಜೆಪಿಗೆ ಎದುರಾಗಿ ಹಿಂದೂಸ್ಥಾನ್ ಜನತಾ ಪಾರ್ಟಿ ಉದಯ

error: Content is protected !!
Scroll to Top